alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ನಡು ರಸ್ತೆಯಲ್ಲಿ ಮಹಿಳೆಯ ಹತ್ಯೆ

ನಡುರಸ್ತೆಯಲ್ಲಿ ಮಹಿಳೆಯನ್ನು ಹೊಡೆದು ಸಾಯಿಸಿದ ಘಟನೆ ಪೂರ್ವ ದೆಹಲಿಯ ಜಗತ್ ಪುರಿಯಲ್ಲಿ ನಡೆದಿದೆ. 55 ವರ್ಷದ ಮಹಿಳೆಯನ್ನು ಆಕೆಯ ಭಾವ ಮತ್ತು ಆತನ ಮಕ್ಕಳು ಕ್ರೂರವಾಗಿ ಹೊಡೆದು ಸಾಯಿಸಿದ್ದಾರೆ.

ಆಸ್ತಿ ವಿಚಾರಕ್ಕೆ ಫರೀದಾ ಪತಿ ಹೈದರ್ ಮತ್ತು ಆತನ ಸಹೋದರರು ಅವರ ಮಕ್ಕಳ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಆದ್ರೆ ಮೇ 16 ರಂದು ದಾಯಾದಿಗಳ ಗಲಾಟೆ ಅತಿರೇಕಕ್ಕೆ ಹೋದಾಗ, ಜಗಳ ಬಿಡಿಸಲು ಫರೀದಾ ಮಧ್ಯ ಪ್ರವೇಶಿಸಿದ್ದಾಳೆ. ಈ ವೇಳೆ ಮಹಿಳೆಯೆಂದು ನೋಡದೆ ಆಕೆಯನ್ನ ರಸ್ತೆಗೆಳೆದು ತಂದು ಜನಜಂಗುಳಿ ಇದ್ದಾಗಲೇ ಮನಬಂದಂತೆ ಥಳಿಸಿದ್ದಾರೆ.

ಬೇಸ್ ಬಾಲ್ ಬ್ಯಾಟ್ ಮತ್ತು ಕಬ್ಬಿಣದ ರಾಡ್ ನಿಂದ ಭಾವ ಮತ್ತು ಆತನ ಮಕ್ಕಳು ಹೊಡೆದಿದ್ದಾರೆ. ಅಲ್ಲೇ ಫರೀದಾಗೆ ಅರ್ಧ ಜೀವ ಹೋಗಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರಲ್ಲಾಗಲೇ ಆಕೆಯ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಇತ್ತ ಪ್ರಕಣವನ್ನು ದಾಖಲಿಸಿಕೊಂಡ ಪೊಲೀಸರು ಫರೀದಾಳ ಭಾವನನ್ನು ಬಂಧಿಸಿದ್ದಾರೆ, ಆದ್ರೆ ಮಗ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...