alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹವಾಗಲು ನಿರಾಕರಿಸಿದ್ದಕ್ಕೆ ಏನ್ಮಾಡಿದ್ದಾಳೆ ಗೊತ್ತಾ?

blood-covered-knifeತಾನು ಪ್ರೀತಿಸುತ್ತಿದ್ದ ವ್ಯಕ್ತಿ ತನ್ನ ಕುಟುಂಬದವರ ಒತ್ತಡಕ್ಕೆ ಮಣಿದು ವಿವಾಹವಾಗಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಯುವತಿ ಆತನ ಮರ್ಮಾಗವನ್ನೇ ಕತ್ತರಿಸಿದ್ದಾಳೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಇಂತದೊಂದು ವಿಲಕ್ಷಣ ಘಟನೆ ನವದೆಹಲಿಯಲ್ಲಿ ನಡೆದಿದೆ.

ದೆಹಲಿ ಹೊರ ವಲಯದ ಮಂಗಲ್ ಪುರಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಬೀದಿ ಬದಿ ವ್ಯಾಪಾರಿ 35 ವರ್ಷದ ಈ ವ್ಯಕ್ತಿ ತನ್ನ ಮನೆ ಸಮೀಪದಲ್ಲೇ ವಾಸವಾಗಿದ್ದ 22 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ.

ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರ ಬೆಂಬಲವಿತ್ತಾದರೂ ಆತನ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ತನ್ನನ್ನು ವಿವಾಹವಾಗುವಂತೆ ಯುವತಿ ಬಲವಂತಪಡಿಸುತ್ತಿದ್ದು, ಇದಕ್ಕೆ ಆತ ನಿರಾಕರಿಸಿದ್ದನೆನ್ನಲಾಗಿದೆ. ಬುಧವಾರ ರಾತ್ರಿ ಯುವತಿಯ ಅತ್ತಿಗೆ ಆತನನ್ನು ತಮ್ಮ ಮನೆಗೆ ಕರೆದಿದ್ದು, ಅಲ್ಲಿ ಯುವತಿ ವಿವಾಹವಾಗುವಂತೆ ಕೇಳಿದ್ದಾಳೆ.

ಇದಕ್ಕೆ ಆತ ನಿರಾಕರಿಸುತ್ತಿದ್ದಂತೆಯೇ ಆಕ್ರೋಶಗೊಂಡು ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ಆತನ ಚೀರಾಟ ಕೇಳಿ ನೆರೆಹೊರೆಯವರು ಆಗಮಿಸುತ್ತಿದ್ದಂತೆಯೇ ಯುವತಿ, ಆಕೆಯ ಸಹೋದರ ಹಾಗೂ ಅತ್ತಿಗೆ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದವನನ್ನು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದರೂ ಮರ್ಮಾಂಗ ಮರು ಜೋಡಣೆ ಕಷ್ಟವೆಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...