alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರನಿಗೆ ಥಳಿಸಿದ್ದಕ್ಕೆ ಸಹೋದರಿ ಮಾಡಿದ್ದೇನು ಗೊತ್ತಾ?

ಘಾಜಿಯಾಬಾದ್: ಸಹೋದರನಿಗೆ ಥಳಿಸಿದ ಪೊಲೀಸ್‌ ಪೇದೆಗೆ ಸಹೋದರಿ ಪೆಟ್ಟಿನ ರುಚಿ ತೋರಿಸಿದ್ದಾಳೆ. ಈ ಸಂಬಂಧ ಇಸ್ಮಾಯಿಲ್‌ ಹಾಗೂ ರಶೀದ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಲೋನಿಯ ಬಲರಾಂ ಕಾಲೋನಿಯಲ್ಲಿನ ಎಸ್‌ಬಿಐ ಬ್ಯಾಂಕ್‌ನಲ್ಲಿ ಆಧಾರ್‌ ಕಾರ್ಡ್‌ ನೋಂದಣಿ ನಡೆಯುತ್ತಿತ್ತು. ಈ ವೇಳೆ ಇಮ್ರಾನ್‌ ಎಂಬಾತ ಬ್ಯಾಂಕ್‌ ಸಿಬ್ಬಂದಿಯೊಂದಿಗೆ ಜಟಾಪಟಿ ನಡೆಸಿದ್ದಾನೆ. ಇದನ್ನು ನಿಯಂತ್ರಿಸಲು ಬ್ಯಾಂಕ್‌ನಲ್ಲಿದ್ದ ಪೊಲೀಸ್‌ ಪೇದೆಯ ಸಹಾಯ ಕೇಳಲಾಗಿದೆ. ಈ ವೇಳೆ ಇಮ್ರಾನ್‌, ಪೊಲೀಸ್‌ ಹಾಗೂ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ. ಇಮ್ರಾನ್‌ ನನ್ನು ಪೊಲೀಸರು ಬ್ಯಾಂಕ್‌ನಿಂದ ಹೊರ ಹಾಕಿದ್ದಾರೆ.

ಈ ವೇಳೆ ಕುಟುಂಬ ಸದಸ್ಯರಿಗೆ ಆತ ಕರೆ ಮಾಡಿದ್ದಾನೆ. ಇದೇ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಇಮ್ರಾನ್‌ಗೆ ಮಹಿಳಾ ಪೊಲೀಸ್‌ ಪೇದೆ ಥಳಿಸಿದ್ದಾಳೆ. ಇದಕ್ಕೆ ಸಿಟ್ಟಿಗೆದ್ದ ಇಮ್ರಾನ್‌ ಸಹೋದರಿ ಮಹಿಳಾ ಪೇದೆಗೆ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಈ ದೃಶ್ಯ ಸಂಪೂರ್ಣವಾಗಿ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು. ಇನ್ನೂ ಇಬ್ಬರನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...