
ಗಂಡು ಮಗು ಜನಿಸಲು ಔಷಧಿ ನೀಡುವುದಾಗಿ ಜನರನ್ನು ನಂಬಿಸುತ್ತಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಫರಿದಾಬಾದ್ ಪೊಲೀಸರು ಮಹಿಳೆಯನ್ನು ಸಮಯಪುರ ಗ್ರಾಮದಲ್ಲಿ ಬಂಧಿಸಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ದಾಳಿ ವೇಳೆ ಮಹಿಳೆ ಔಷಧಿ ನೀಡುತ್ತಿದ್ದಳು ಎನ್ನಲಾಗಿದೆ.
ಮಹಿಳೆ ಸಮಯಪುರ ಗ್ರಾಮದ ಮನೆಯೊಂದರಲ್ಲಿ ಗಂಡು ಮಗು ಜನಿಸಲು ಔಷಧಿ ನೀಡುತ್ತಿದ್ದಳು. ಈ ಬಗ್ಗೆ ಪೊಲೀಸರಿಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ಮಹಿಳೆ ಬಂಧನಕ್ಕೆ ಜಾಲ ಬೀಸಿದ ಪೊಲೀಸರು ನಕಲಿ ಗ್ರಾಹಕರೊಬ್ಬರನ್ನು ಮಹಿಳೆ ಮನೆಗೆ ಕಳುಹಿಸಿದ್ದಾರೆ.
ನಕಲಿ ಗ್ರಾಹಕರಿಗೆ ಔಷಧಿ ನೀಡುವಾಗ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಕಾಲ ಎಷ್ಟು ಬದಲಾದ್ರೂ ಲಿಂಗ ತಾರತಮ್ಯ ಕಡಿಮೆಯಾಗಿಲ್ಲ. ಗಂಡು ಮಗು ಪಡೆಯಲು ಜನರು ಏನು ಬೇಕಾದ್ರೂ ಮಾಡಲು ಸಿದ್ಧರಿರುತ್ತಾರೆಂದು ಪೊಲೀಸರು ಹೇಳಿದ್ದಾರೆ.