alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರನೇ ಮಹಡಿಯಿಂದ ಬೆತ್ತಲಾಗಿ ಜಿಗಿದ‌ ಯುವತಿ

23 ವರ್ಷದ ನೇಪಾಳಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರೆ, ಇತ್ತ ತನ್ನನ್ನು ತಾನು ಕಾಪಾಡಿಕೊಳ್ಳಲು ಮೂರನೇ ಅಂತಸ್ತಿನಿಂದ ಬೆತ್ತಲಾಗಿ ಜಿಗಿದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಘಟನೆ ರಾಜಸ್ತಾನದ ಜೈಪುರದಿಂದ 18 ಕಿಮೀ ದೂರದಲ್ಲಿರುವ ಮುಹಾನಾ ಭಾಗದ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೇಪಾಳಿ ಮೂಲದ ಸಂತ್ರಸ್ತೆ ಮೇಲೆ ಸತತ ಎರಡು ದಿನ ಗ್ಯಾಂಗ್ ರೇಪ್ ನಡೆಸಿರುವ ಇಬ್ಬರು ಆರೋಪಿಗಳಿಂದ ತಪ್ಪಿಸಿಕೊಳ್ಳಲು ಸಂತ್ರಸ್ತೆ ಮೂರನೇ ಮಹಡಿಯಿಂದ ಬೆತ್ತಲಾಗಿ ಜಿಗಿದಿದ್ದು, ತೀವ್ರ ಗಾಯಗೊಂಡಿದ್ದಾಳೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಜೈಪುರ ದಕ್ಷಿಣ ಎಸಿಪಿ ಕೆ.ಕೆ ಅವಸ್ಥಿ ಮಾತನಾಡಿದ್ದು, ನೇಪಾಳಿ ಯುವತಿಯನ್ನು ಮನೆಗೆ ಕರೆದುಕೊಂಡು ಬಂದಿರುವ 19 ವರ್ಷದ ಲೊಕೇಶ್ ಸೈನಿ ಹಾಗೂ 24 ವರ್ಷದ ಕಮಲ್ ಸೈನಿ ಶುಕ್ರವಾರ ಹಾಗೂ ಶನಿವಾರ ಅತ್ಯಾಚಾರ ಎಸಗಿದ್ದಾರೆ. ಇವರಿಂದ ರಕ್ಷಿಸಿಕೊಳ್ಳಲು ಮೂರನೇ ಮಹಡಿಯಿಂದ ಯುವತಿ ಜಿಗಿದಿದ್ದಾಳೆ. ಈ ಸಂಬಂಧ ಈಗಾಗಲೇ ಶನಿವಾರ ರಾತ್ರಿ ವೇಳೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಲಾಗಿದೆ. ಸದ್ಯ ಜೈಪುರಿಯಾ ಆಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿವೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...