alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಎದೆ ಮೇಲೆ ಕುಳಿತು ರಕ್ತ ಕುಡಿತಿದ್ಲು ಈಕೆ

black_magic_1502508877_618x347

ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವಾಮಾಚಾರದ ಹೆಸರಿನಲ್ಲಿ ಮಹಿಳೆಯೊಬ್ಬಳು ರಾತ್ರಿ ಗಂಡನ ಎದೆ ಮೇಲೆ ಕುಳಿತುಕೊಂಡು ಆತನ ರಕ್ತ ಕುಡಿದಿದ್ದಾಳೆ.

ಮಾಧ್ಯಮಗಳ ವರದಿ ಪ್ರಕಾರ, ಆರೋಪಿ ಮಹಿಳೆ ಹೆಸರು ಸಾವಿತ್ರಿ. ಈ ಮಹಿಳೆ ವಿರುದ್ಧ ಪತಿ ಮನೆಯವರು ವಾಮಾಚಾರದ ಆರೋಪ ಹೊರಿಸಿದ್ದಾರೆ. ಸಾವಿತ್ರಿ ಅತ್ತೆ ಪ್ರಕಾರ ಸಾವಿತ್ರಿ ಪತಿ ಅಭಿಜಿತ್ ಎದೆ ಮೇಲೆ ಕುಳಿತುಕೊಂಡು ತ್ರಿಶೂಲದಿಂದ ಆತನ ಎದೆಯನ್ನು ಚುಚ್ಚಿ ರಕ್ತ ಹೀರಿದ್ದಾಳಂತೆ.

ಅಭಿಜಿತ್ ಆರೋಗ್ಯ ಹದಗೆಟ್ಟಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತಂತೆ. ಸಾಕಷ್ಟು ರಕ್ತ ನೀಡಿದ್ರಂತೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನಂತೆ. ಕೋಪಗೊಂಡ ಅಭಿಜಿತ್ ಮನೆಯವರು ಸಾವಿತ್ರಿ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ರಕ್ಷಿಸಿದ್ದು, ಸಾವಿತ್ರಿಯನ್ನು ವಶಕ್ಕೆ ಪಡೆದಿದ್ದಾರೆ. ಅಕ್ಕ-ಪಕ್ಕದವರೂ ಇದಕ್ಕೆ ಪುಷ್ಠಿ ನೀಡಿದ್ದಾರೆ. ರಾತ್ರಿಯಾದ್ರೆ ಸಾವಿತ್ರಿ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದಳು ಎಂದು ಅವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...