alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿಗೆ ಜನ್ಮ ನೀಡಿ ಅರೆ ಕ್ಷಣದಲ್ಲಿ ಪರಾರಿಯಾದ ತಾಯಿ

ಉದಯ್ಪುರ ಮಹಾರಾಣ ಭೋಪಾಲ್ ಆಸ್ಪತ್ರೆಯಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಆಸ್ಪತ್ರೆಗೆ ಬಂದ ಗರ್ಭಿಣಿಯೊಬ್ಬಳು ಹೆರಿಗೆಯಾಗಿ 5 ನಿಮಿಷದಲ್ಲಿ ಮಗು ಬಿಟ್ಟು ಪರಾರಿಯಾಗಿದ್ದಾಳೆ. ಮಹಿಳೆ ಯಾರು? ಎಲ್ಲಿಂದ ಬಂದಿದ್ದಳು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪೊಲೀಸರು ಮಹಿಳೆ ಹುಡುಕಾಟ ಶುರು ಮಾಡಿದ್ದಾರೆ.

ಮಾಹಿತಿ ಪ್ರಕಾರ ಗರ್ಭಿಣಿ ತಡರಾತ್ರಿ ಆಸ್ಪತ್ರೆಗೆ ಬಂದಿದ್ದಾಳೆ. ಹೊಟ್ಟೆ ನೋವೆಂದು ಎಮರ್ಜನ್ಸಿ ವಾರ್ಡ್ ಗೆ ಹೋಗಿದ್ದಾಳೆ. ಅಲ್ಲಿ ಬಟ್ಟೆ ಬದಲಿಸುವ ನೆಪ ಹೇಳಿ ನರ್ಸ್ ಗಳನ್ನು ಹೊರಗೆ ಕಳುಹಿಸಿದ್ದಾಳೆ. ಅಲ್ಲಿಯೇ ಮಗುವಿಗೆ ಜನ್ಮ ನೀಡಿ ಪರಾರಿಯಾಗಿದ್ದಾಳೆ.

ಮಗುವಿನ ಅಳುವ ಶಬ್ಧ ಕೇಳಿ ಸಿಬ್ಬಂದಿ ಅಲ್ಲಿಗೆ ಬಂದಿದ್ದಾರೆ. ರಕ್ತದ ಮಡುವಿನಲ್ಲಿ ಮಗು ಅಳುತ್ತಿರುವುದನ್ನು ನೋಡಿದ್ದಾರೆ. ಎಷ್ಟು ಹುಡುಕಾಡಿದ್ರೂ ಮಗುವಿನ ತಾಯಿ ಸಿಗಲಿಲ್ಲ. ಸದ್ಯ ಮಗುವನ್ನು ಮಕ್ಕಳ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮರಾ ಮೂಲಕ ಮಹಿಳೆ ಪತ್ತೆಗೆ ಬಲೆ ಬೀಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...