alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜು ಕಟ್ಟಡದಿಂದ ಹಾರಿ ಸಾವಿಗೆ ಶರಣಾದ ಯುವತಿ

ನವದೆಹಲಿ: ವಿವೇಕಾನಂದ ಇನ್‌ಸ್ಟಿಟ್ಯೂಷನ್‌ ಫಾರ್‌ ಪ್ರೊಫೆಷನಲ್‌ ಸ್ಟಡೀಸ್‌ನಲ್ಲಿ ಸ್ಯಾತಕೋತ್ತರ ಪದವಿ ಕುರಿತು ವಿಚಾರಿಸಿದ ಯುವತಿ ಬಳಿಕ ಅದೇ ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಖಾಸಗಿ ಸಂಸ್ಥೆಯ ಉದ್ಯೋಗಿ ರಾಜೇಂದ್ರ ಪ್ಲೇಸ್‌ನಲ್ಲಿನ ವಾರಿಶ ರಾಯಿಸ್‌(25) ಆತ್ಮಹತ್ಯೆಗೆ ಶರಣಾದವಳು. ಕಟ್ಟಡದ 7ನೇ ಮಹಡಿಯಲ್ಲಿ ಓಡಾಡುತ್ತಿದ್ದ ವಾರಿಶಳನ್ನು ಪ್ರಾಧ್ಯಾಪಕರು ವಿಚಾರಿಸಿದ್ದಾರೆ. ಈ ವೇಳೆ, ಕಾಲೇಜು ಪ್ರವೇಶಾತಿ ಬಗ್ಗೆ ಮಾಹಿತಿ ಅಗತ್ಯವಿದೆ ಎಂದಾಗ, ಪ್ರಾಧ್ಯಾಪಕರು, 5ನೇ ಮಹಡಿಯ ದಾರಿ ತೋರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇಬ್ಬರು ಪ್ರಾಧ್ಯಾಪಕರು ವಾರಿಶ ಬಳಿ ಮಾತನಾಡುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರವೇಶಾತಿ ಕುರಿತು ನೀಡುತ್ತಿರುವ ಮಾಹಿತಿ ಸ್ಪಷ್ಟವಾಗಿ ಕಂಡಿದೆ. ಆದರೆ ಯುವತಿ, 7ನೇ ಮಹಡಿಗೆ ತೆರಳಿ, ಅಲ್ಲಿಂದ ಕೆಳಕ್ಕೆ ಹಾರಿದ್ದಾಳೆ.

ದೆಹಲಿ ಯೂನಿವರ್ಸಿಟಿಯಿಂದ ಪದವಿ ಪಡೆದಿರುವ ವಾರಿಶ, ತಂದೆಯ ಮೂವರು ಪುತ್ರಿಯರಲ್ಲಿ ಹಿರಿಯಳು. ತಂದೆ ಖಾಸಗಿ ಶೂ ಸಂಸ್ಥೆಯಲ್ಲಿ ಕೆಲಸದಲ್ಲಿದ್ದರು. ಇತ್ತೀಚೆಗೆ ಕೆಲಸ ಬಿಟ್ಟಿದ್ದಾರೆ. ಯಾವುದೇ ಡೆತ್‌ ನೋಟ್‌ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಯುವತಿಯ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...