alex Certify
ಕನ್ನಡ ದುನಿಯಾ       Mobile App
       

Kannada Duniya

ಮಲಗಿದ್ದ ಪತಿ ಹತ್ಯೆಗೆ ಮುಂದಾಗಿದ್ಲು ಪತ್ನಿ: ಹೀಗೆ ಬಚಾವ್ ಆಯ್ತು ಪ್ರಾಣ

ಬಿಹಾರದಲ್ಲಿ ದಂಗಾಗಿಸುವ ಘಟನೆಯೊಂದು ನಡೆದಿದೆ. ಮಲಗಿದ್ದ ಪತಿ ಹತ್ಯೆಗೆ ಪತ್ನಿ ಮುಂದಾಗಿದ್ದಾಳೆ. ಅಚಾನಕ್ ಪತಿ ಎಚ್ಚರವಾಗಿದ್ದು ತನ್ನ ಜೀವ ಉಳಿಸಿಕೊಂಡಿದ್ದಾನೆ.

ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಮೊಹಮ್ಮದ್ ಸಲಾಹುದ್ದೀನ್ ಮಲಗಿದ್ದ ವೇಳೆ ಪತ್ನಿ ಜುಲೇಕಾ ಪತಿ ಹತ್ಯೆಗೆ ಮುಂದಾಗಿದ್ದಾಳೆ. ಚಾಕುವಿನಿಂದ ಆತನ ಕತ್ತು ಕೊಯ್ಯಲು ಮುಂದಾಗಿದ್ದಾಳೆ. ಈ ವೇಳೆ ಮೊಹಮ್ಮದ್ ಗೆ ಎಚ್ಚರವಾಗಿದೆಯಂತೆ. ಪತ್ನಿ ವಿರುದ್ಧ ಮೊಹಮ್ಮದ್ ಹತ್ಯೆ ಆರೋಪ ಹೊರಿಸಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಜುಲೇಕಾಳನ್ನು ಬಂಧಿಸಿದ್ದಾರೆ. ಮೊಹಮ್ಮದ್ ಮನೆಯಲ್ಲಿದ್ದ ಚಾಕುವನ್ನು ವಶಕ್ಕೆ ಪಡೆದಿದ್ದಾರೆ. ಅನೇಕ ದಿನಗಳಿಂದ ದಂಪತಿ ಮಧ್ಯೆ ವಿವಾದವಿತ್ತು ಎನ್ನಲಾಗಿದೆ. ಇವರಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿದೆ.

ಕಳೆದ ವರ್ಷ ಜುಲೇಕಾ ಪತಿ ವಿರುದ್ಧ ಹಿಂಸೆ, ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ನನ್ನು ಪೊಲೀಸರು ಬಂಧಿಸಿದ್ದರು. 1 ತಿಂಗಳು ಜೈಲಿನಲ್ಲಿದ್ದ ಮೊಹಮ್ಮದ್ ನಂತ್ರ ಪತ್ನಿ ಜೊತೆ ಮತ್ತೆ ವಾಸ ಶುರು ಮಾಡಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...