alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಕಿರುಕುಳಕ್ಕೆ ಬೆದರಿದ ಪತಿ ರಕ್ಷಣೆಗಾಗಿ ಕೋರ್ಟ್ ಮೊರೆ

ಪತಿ ಕಿರುಕುಳಕ್ಕೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ಕೋರ್ಟ್ ಮೆಟ್ಟಿಲೇರುತ್ತವೆ. ಆದ್ರೆ ಇಲ್ಲಿ ಸ್ವಲ್ಪ ಭಿನ್ನವಾದ ಘಟನೆ ನಡೆದಿದೆ. ಪತ್ನಿ ಕಾಟಕ್ಕೆ ಬೇಸತ್ತ ಪತಿಯೊಬ್ಬ ಕೋರ್ಟ್ ಮುಂದೆ ಬಂದಿದ್ದಾನೆ. ಶೇಕಡಾ 90 ರಷ್ಟು ದಿವ್ಯಾಂಗನಾಗಿರುವ ಪತಿಗೆ ಪತ್ನಿ ಕಿರುಕುಳ ನೀಡ್ತಾಳಂತೆ. ನನ್ನ ಜೀವಕ್ಕೆ ಅಪಾಯವಿದೆ, ರಕ್ಷಣೆ ನೀಡಿ ಎಂದು ಪತಿ ಕೋರ್ಟ್ ಮೊರೆ ಹೋಗಿದ್ದಾನೆ.

ದೆಹಲಿಯ ಪೀಡಿತ ಸಂಜೀವ್ ಶರ್ಮಾನಿಂದ ದೂರವಿರುವ ಪತ್ನಿ, ಮಕ್ಕಳಿಗೂ ಹಿಂಸೆ ನೀಡುತ್ತಾಳಂತೆ. ಸಂಜೀವ್ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದು, ಮಕ್ಕಳ ಮುಂದೆ ಹೊಡೆಯುತ್ತಾಳಂತೆ ಪತ್ನಿ. ಈ ಸಂಬಂಧ ಪತ್ನಿಗೆ ಕೋರ್ಟ್ ನೋಟೀಸ್ ಜಾರಿ ಮಾಡಿದೆ. ಆಗಸ್ಟ್ 27 ರಂದು ಹಾಜರಾಗುವಂತೆ ಸೂಚನೆ ನೀಡಿದೆ.

ಇದಲ್ಲದೆ ಪೀಡಿತನಿಗೆ ರಕ್ಷಣೆ ನೀಡುವಂತೆ ಸ್ಥಳೀಯ ಠಾಣಾಧಿಕಾರಿಗೆ ಸೂಚನೆ ನೀಡಿದೆ. ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಹಾಗಾಗಿ ಪೀಡಿತನಿಗೆ ರಕ್ಷಣೆ ನೀಡಿ. ಪೊಲೀಸ್ ಅಧಿಕಾರಿಗಳ 2 ನಂಬರ್ ನೀಡಿ. ಆತ ಯಾವಾಗ ಕರೆ ಮಾಡಿದ್ರೂ ಆತನ ರಕ್ಷಣೆಗೆ ಸಿದ್ಧವಿರಿ ಎಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...