alex Certify
ಕನ್ನಡ ದುನಿಯಾ       Mobile App
       

Kannada Duniya

ಕಟ್ಟಿ ಹಾಕಿ ಸ್ನೇಹಿತನಿಂದ ಪತ್ನಿ ರೇಪ್ ಮಾಡಿಸಿದ ಪಾಪಿ

ಪತಿಯೊಬ್ಬ ತನ್ನ ಸ್ನೇಹಿತರಿಂದಲೇ ಪತ್ನಿ ಮೇಲೆ ಅತ್ಯಾಚಾರವೆಸಗಿಸಿದ್ದಾನೆ. ನಂತ್ರ ಪತ್ನಿಯನ್ನು ಕಟ್ಟಿ ಹಾಕಿ ಥಳಿಸಿದ್ದಾನೆ. ವರದಕ್ಷಿಣೆ ಸರಿಯಾಗಿ ನೀಡಿಲ್ಲ ಎನ್ನುವ ಕಾರಣಕ್ಕೆ ಪತಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.

ಉತ್ತರ ಪ್ರದೇಶದ ಬರೇಲಿಯಲ್ಲಿ ಘಟನೆ ನಡೆದಿದೆ. 2015ರಲ್ಲಿ ಪೀಡಿತೆ ಮದುವೆ ನಡೆದಿತ್ತು. ವರದಕ್ಷಿಣೆ ವಿಚಾರಕ್ಕೆ ಪತಿ ಹಾಗೂ ಆತನ ಮನೆಯವರು ಮಹಿಳೆಗೆ ಕಿರುಕುಳ ನೀಡ್ತಿದ್ದರು. ಪತಿ ತನ್ನ ಸ್ನೇಹಿತನ ಜೊತೆ ಸಂಬಂಧ ಬೆಳೆಸುವಂತೆ ಒತ್ತಾಯ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ವಿರೋಧಿಸಿದ್ರೆ ಪತ್ನಿಗೆ ಹೊಡೆಯುತ್ತಿದ್ದ.

ಮಾರ್ಚ್ 17ರಂದು ಕೋಣೆಯಲ್ಲಿ ಪತ್ನಿಯನ್ನು ಕಟ್ಟಿಹಾಕಿ ಸ್ನೇಹಿತನನ್ನು ಕೋಣೆಗೆ ಕಳುಹಿಸಿದ್ದಾನೆ. ಸ್ನೇಹಿತ ಅತ್ಯಾಚಾರವೆಸಗಿದ್ದಾನೆಂದು ಮಹಿಳೆ ದೂರಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತಿ ಹಾಗೂ ಸ್ನೇಹಿತನ ವಿರುದ್ಧ ವಿಚಾರಣೆ ಶುರು ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...