alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರ ಸಂಬಂಧಿ ಜೊತೆ ಹಾಸಿಗೆ ಮೇಲಿದ್ದ ಪತ್ನಿ ನೋಡಿದ ಪತಿ…!?

ಮಧ್ಯಪ್ರದೇಶದ ಗ್ವಾಲಿಯರ್ ನ ಮುರಾರ್ ನಲ್ಲಿ ನಡೆದ ಉಮೇಶ್ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಉಮೇಶ್ ಪತ್ನಿ ಹಾಗೂ ಸಹೋದರ ಸಂಬಂಧಿ, ಉಮೇಶ್ ನನ್ನು ಹತ್ಯೆಗೈದಿದ್ದಾರೆ. ಹತ್ಯೆಗೆ ಅಕ್ರಮ ಸಂಬಂಧ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

ಉಮೇಶ್ ಪತ್ನಿ ಮಮತಾ ಹಾಗೂ ಸಹೋದರ ಸಂಬಂಧಿ ಗಜೇಂದ್ರ ಜೊತೆ ಗ್ವಾಲಿಯರ್ ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕೆಲ ತಿಂಗಳ ಹಿಂದೆ ಉಮೇಶ್ ಕೆಲಸ ಅರಸಿ ಗುಜರಾತ್ ನ ಸೂರತ್ ಗೆ ತೆರಳಿದ್ದ. ಅಲ್ಲಿಯೇ ಕೆಲಸ ಮಾಡ್ತಿದ್ದ. ಮಾರ್ಚ್ 30ರಂದು ಉಮೇಶ್ ಮನೆಗೆ ಬಂದಿದ್ದಾನೆ.

ರಾತ್ರಿ ಉಮೇಶ್ ಪತ್ನಿ ಮಮತಾ ಹಾಸಿಗೆಯಲ್ಲಿರಲಿಲ್ಲ. ಉಮೇಶ್, ಗಜೇಂದ್ರನ ರೂಮಿಗೆ ಹೋಗಿದ್ದಾನೆ. ಅಲ್ಲಿ ಗಜೇಂದ್ರನ ಜೊತೆ ಮಮತಾ ಸಿಕ್ಕಿಬಿದ್ದಿದ್ದಾಳೆ. ಪತ್ನಿ ಬೇರೆಯವನ ಜೊತೆ ಮಲಗಿದ್ದು ನೋಡಿ ಆಕ್ರೋಶಗೊಂಡ ಉಮೇಶ್ ಹಲ್ಲೆಗೆ ಯತ್ನಿಸಿದ್ದಾನೆ. ಆದ್ರೆ ಗಜೇಂದ್ರ, ಉಮೇಶ್ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ.

ಇಬ್ಬರೂ ಶವವನ್ನು ಬೇರೆಡೆ ಸಾಗಿಸುವ ಯತ್ನ ನಡೆಸಿದ್ದಾರೆ. ಆದ್ರೆ ನಿಷೇಧಾಜ್ಞೆ ಜಾರಿಯಿದ್ದರಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆಂದು ನಾಟಕವಾಡಿದ್ದಾರೆ. ವಿಚಾರಣೆ ವೇಳೆ ಸತ್ಯ ಬಹಿರಂಗವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...