alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಮಾಡಿದ ಕೆಲಸ ಕೇಳಿ ಅಮೆರಿಕಾದಿಂದ ಓಡಿ ಬಂದ ಪತಿ..!

_1475682878

ಆಕೆ ಭಾರತದಲ್ಲಿ. ಆತ ಅಮೆರಿಕಾದಲ್ಲಿ. ಮದುವೆಯಾದ್ರೂ ಗಂಡನ ಜೊತೆಗಿರುವ ಭಾಗ್ಯ ಆಕೆಗಿಲ್ಲ. ಇದ್ರಿಂದ ಬೇಸರಗೊಂಡ ಪತ್ನಿಯೊಬ್ಬಳು ಮಹತ್ವದ ನಿರ್ಧಾರ ಕೈಗೊಂಡಿದ್ದಾಳೆ.

ಆಕೆ ಮಾಡಿದ ಕೆಲಸ ಕೇಳಿ ಅಮೆರಿಕಾದಲ್ಲಿದ್ದ ಪತಿ ಓಡೋಡಿ ಭಾರತಕ್ಕೆ ಬಂದಿದ್ದಾನೆ. ಘಟನೆ ಹರಿಯಾಣಾದ ರೋಹ್ಟಕ್ ನಲ್ಲಿ ನಡೆದಿದೆ. ಎನ್ ಆರ್ ಐ ಪತ್ನಿಯೊಬ್ಬಳು ವಿಚ್ಛೇದನ ಪಡೆಯದೆ ಇನ್ನೊಂದು ಮದುವೆಯಾಗಿದ್ದಾಳೆ. ಇದನ್ನು ಕೇಳಿದ ಪತಿ ಅಮೆರಿಕಾದಿಂದ ಓಡಿ ಬಂದಿದ್ದಾನೆ.

ಅಮೆರಿಕಾದಿಂದ ಬಂದ ಪತಿ ಸಂಜಯ್, ಸುಮನ್ ವಿರುದ್ಧ ದೂರು ದಾಖಲಿಸಿದ್ದಾನೆ. ಸುಮನ್ ವಿಚ್ಛೇದನ ಪಡೆಯದೆ ಇನ್ನೊಂದು ಮದುವೆಯಾಗಿದ್ದಾಳೆಂದು ಆರೋಪಿಸಿದ್ದಾನೆ. 1998ರಿಂದ ಸಂಜಯ್ ಅಮೆರಿಕಾದಲ್ಲಿ ಕೆಲಸ ಮಾಡ್ತಿದ್ದನಂತೆ. 2003ರಲ್ಲಿ ಸುಮನ್ ಜೊತೆ ಮದುವೆಯಾಗಿದೆ. ಕೆಲ ದಿನಗಳ ಕಾಲ ಪತ್ನಿ ಜೊತೆಗಿದ್ದ ಸಂಜಯ್ ನಂತ್ರ ಅಮೆರಿಕಾಕ್ಕೆ ಹೋಗಿದ್ದಾನೆ.

ಊರಿಗೆ ವಾಪಸ್ ಬಂದಾಗೊಮ್ಮೆ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಆ ನಂತ್ರ ಸುಮನ್ ತವರಿಗೆ ಹೋಗಿದ್ದಳಂತೆ. ಈಗ ಚಂಡೀಘಡದಲ್ಲಿ ವಾಸವಾಗಿರುವ ಸುಮನ್ ಎರಡನೇ ಮದುವೆಯಾಗಿದ್ದಾಳೆಂದು ಸಂಜಯ್ ಆರೋಪಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...