alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ವರು ಪ್ರೇಮಿಗಳ ಜೊತೆ ಪತಿಗೆ ಸಾವಿನ ದಾರಿ ತೋರಿಸಿದ ಖತರ್ನಾಕ್ ಮಹಿಳೆ

ಗೋವಾದ ಟ್ಯಾಕ್ಸಿ ಚಾಲಕ ಬಸವನ ಹತ್ಯಾಕಾಂಡದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಸವನ ಪತ್ನಿ ಹಾಗೂ ಆಕೆಯ ನಾಲ್ವರು ಪ್ರೇಮಿಗಳು ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ. ಹತ್ಯೆ ನಡೆದು 2 ವಾರಗಳ ನಂತ್ರ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೋವಾದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡ್ತಿದ್ದ ಬಸವನಿಗೆ ಪತ್ನಿ ಕಲಾವತಿ ಮೇಲೆ ಸಂಶಯವಿತ್ತು. ಮನೆಗೆ ಪರ ಪುರುಷರು ಬರ್ತಾರೆಂಬ ಅನುಮಾನ ಕಾಡಿತ್ತು. ದಿನ ಕಳೆದಂತೆ ಬಸವನ ಅನುಮಾನ ಸತ್ಯವಾಗ್ತಾ ಹೋಯ್ತು. ಒಂದು ದಿನ ಒಬ್ಬ, ಇನ್ನೊಂದು ದಿನ ಇನ್ನೊಬ್ಬ, ಮತ್ತೊಂದು ದಿನ ಮತ್ತೊಬ್ಬ ಹೀಗೆ ನಾಲ್ವರು ಆಗಾಗ ಬಸವನ ಮನೆಗೆ ಬರ್ತಿದ್ದರು.

ಕಲಾವತಿಗೆ ಬರ್ತಿದ್ದ ಮೊಬೈಲ್ ಮೆಸ್ಸೇಜ್, ಫೋನ್ ಗಳ ಬಗ್ಗೆ ಬಸವ ಪ್ರಶ್ನೆ ಮಾಡಿದ್ರೆ ಆಕೆ ಯಾವುದೇ ಉತ್ತರ ನೀಡ್ತಿರಲಿಲ್ಲ. ಕೆಲ ದಿನಗಳ ಹಿಂದೆ ಗಲಾಟೆ ವಿಕೋಪಕ್ಕೆ ತಿರುಗಿದೆ. ಇದಕ್ಕೊಂದು ಅಂತ್ಯ ಹಾಡಬೇಕೆಂದು ಬಸವ ರಾತ್ರಿ ಮನೆಗೆ ಬಂದಿದ್ದಾನೆ. ಆದ್ರೆ ಬಸವನ ಮನೆಯಲ್ಲಿ ಕಲಾವತಿ ಜೊತೆ ಮೊದಲೇ ಇದ್ದ ನಾಲ್ವರು ಪ್ರೇಮಿಗಳು ಬಸವನಿಗೆ ಸಾವಿನ ಮನೆ ತೋರಿಸಿದ್ದಾರೆ.

ಮೂರು ಬ್ಯಾಗ್ ನಲ್ಲಿ ಬಸವನ ದೇಹ ತುಂಬಿ ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದಿದ್ದಾರೆ. ಬಸವನ ಸಂಬಂಧಿಕರು ಯಾರೂ ಗೋವಾದಲ್ಲಿ ಇರದ ಕಾರಣ ಕಲಾವತಿ ಸೇರಿ ನಾಲ್ವರು ಪ್ರೇಮಿಗಳು ನೆಮ್ಮದಿಯಾಗಿದ್ದರು. ಆದ್ರೆ ಸ್ಥಳೀಯ ವ್ಯಕ್ತಿಯೊಬ್ಬ ಕೊಲೆ ನಡೆಯುವುದನ್ನು ನೋಡಿದ್ದ ಎನ್ನಲಾಗಿದೆ. ಆತ ಎಲ್ಲವನ್ನೂ ಪೊಲೀಸರಿಗೆ ಹೇಳಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...