alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಹತ್ಯೆ ಮಾಡಿದ ಕೋಣೆಯಲ್ಲಿ ಪ್ರೇಮಿ ಜೊತೆ ಮಲಗ್ತಿದ್ಲು ಪತ್ನಿ

ಬಿಹಾರದ ಬಾರಾಚಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬಳ ವಿರುದ್ಧ ಪತಿ ಹತ್ಯೆ ಹಾಗೂ ತನ್ನ ಕೋಣೆಯಲ್ಲಿಯೇ ಶವವನ್ನು ಹೂಳಿದ ಆರೋಪ ಕೇಳಿ ಬಂದಿದೆ. ಮಹಿಳೆ ತನ್ನ ಪ್ರೇಮಿ ಜೊತೆ ಸೇರಿ ಈ ಕೃತ್ಯವೆಸಗಿದ್ದಾಳೆ. ದೂರು ದಾಖಲಿಸಿಕೊಂಡು ಮಹಿಳೆ ಬಂಧಿಸಿರುವ ಪೊಲೀಸರು ಶವವನ್ನು ಹೊರಕ್ಕೆ ತೆಗೆದಿದ್ದಾರೆ.

ಆರೋಪಿ ಜಮುನಿ ದೇವಿ ಪ್ರೇಮಿ ಜೊತೆ ಸೇರಿ ಪತಿ ಹತ್ಯೆ ಮಾಡಿದ್ದಾಳೆ. ಒಂದು ವಾರದ ಹಿಂದೆ ಘಟನೆ ನಡೆದಿದೆ. ಚಿಕ್ಕಪ್ಪ ಮನೆಯಲ್ಲಿ ಕಾಣಿಸ್ತಿಲ್ಲ ಎಂದು ಸಹೋದರನ ಮಗ ದೂರು ನೀಡಿದ್ದ ಎನ್ನಲಾಗಿದೆ. ವಿಚಾರಣೆ ವೇಳೆ ಪತ್ನಿ ಬಾಯಿ ಬಿಟ್ಟಿದ್ದಾಳೆ. ಪತಿಯನ್ನು ಹತ್ಯೆ ಮಾಡಿ ಶವವನ್ನು ಹೂಳಿದ್ದ ಪತ್ನಿ ಅದೇ ಕೋಣೆಯಲ್ಲಿ ಪ್ರೇಮಿ ಜೊತೆ ಮಲಗುತ್ತಿದ್ದಳಂತೆ.

ಸರಿಯಾಗಿ ಹೂಳದ ಕಾರಣ ಕೋಣೆಯಲ್ಲಿ ವಾಸನೆ ಬರ್ತಿತ್ತು ಎನ್ನಲಾಗಿದೆ. ಹಾಗಾಗಿ ಮಹಿಳೆ ಗ್ರಾಮದ ಮುಖ್ಯಸ್ಥನಿಗೆ ಹಣ ನೀಡಿ ಕೇಸ್ ಮುಚ್ಚಿ ಹಾಕಲು ಯತ್ನಿಸಿದ್ದಾಳೆ. ಆದ್ರೆ ಮುಖ್ಯಸ್ಥ ಪೊಲೀಸರಿಗೆ ವಿಷ್ಯ ತಿಳಿಸಿದ್ದಾನೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...