alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಖಾಸಗಿ ಅಂಗ ಕತ್ತರಿಸಲು ಸುಫಾರಿ ನೀಡಿದ ಪತ್ನಿ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಕ್ರೈಂ ಜಗತ್ತು ಬೆಚ್ಚಿ ಬೀಳುವ ಘಟನೆ ನಡೆದಿದೆ. ವೈದ್ಯರೊಬ್ಬರ ಪತ್ನಿ ಗಂಡನ ಖಾಸಗಿ ಅಂಗ ಕತ್ತರಿಸುವಂತೆ ಸುಫಾರಿ ನೀಡಿದ್ದಾಳೆ. ನಂತ್ರ ಪತಿಯನ್ನು ಕೊಲೆ ಮಾಡಿಸಿದ್ದಾಳೆ. ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ.ಶಫತ್ ಉಲ್ಲಾಹ್ ಖಾನ್ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಫತ್ ಉಲ್ಲಾಹ್ (55)ರನ್ನು ಅವ್ರ ಪತ್ನಿ ಆಯೆಷಾ ಖಾನ್ (50) ಕೊಲೆ ಮಾಡಿಸಿದ್ದಾಳೆಂಬುದು ಬಹಿರಂಗವಾಗಿದೆ. 1991ರಲ್ಲಿ ಆಯೆಷಾ ಹಾಗೂ ಶಫತ್ ಉಲ್ಲಾಹ್ ಪ್ರೇಮ ವಿವಾಹವಾಗಿದ್ದರಂತೆ. ಅನೇಕ ಹುಡುಗಿಯರ ಜೊತೆ ಶಫರ್ ಉಲ್ಲಾಹ್ ಶಾರೀರಿಕ ಸಂಬಂಧ ಹೊಂದಿದ್ದನಂತೆ. ನೌಕರಿ ಆಸೆ ತೋರಿಸಿ ಶೋಷಣೆ ಮಾಡ್ತಿದ್ದನಂತೆ.

ಆಯೆಷಾ ಸೋದರ ಸೊಸೆ ಮೇಲೂ ಅತ್ಯಾಚಾರವೆಸಗಿದ್ದನಂತೆ. ಶಫತ್ ತನ್ನ ಮಗಳ ಮೇಲೆಯೇ ಕಣ್ಣು ಹಾಕಿದ್ದ ಎಂದು ಆಯೆಷಾ ದೂರಿದ್ದಾಳೆ. ತನ್ನ ಸೊಸೆ ನಂದಿನಿ ವಿಶ್ವಕರ್ಮ ಗೆ ತನ್ನ ಪರಿಸ್ಥಿತಿ ಹೇಳಿದ್ದಳಂತೆ. ರಾಜೇಶ್ ಹಾಗೂ ಆತನ ಇನ್ನಿಬ್ಬರು ಸ್ನೇಹಿತರು ಖಾಸಗಿ ಅಂಗ ಕತ್ತರಿಸಲು ಸುಫಾರಿ ಪಡೆದಿದ್ದರಂತೆ. ಆದ್ರೆ ಅದು ಯಶಸ್ವಿಯಾಗಲಿಲ್ಲ ಎನ್ನುವ ಕಾರಣಕ್ಕೆ ಎಲ್ಲರೂ ಸೇರಿ ಹತ್ಯೆ ಮಾಡಿದ್ದರಂತೆ.

ಶಫತ್ ಹತ್ಯೆ ಗೈದಲ್ಲಿ ಒಂದು ಫ್ಲಾಟ್ ಹಾಗೂ ಹಣ ನೀಡುವುದಾಗಿ ಆಯೆಷಾ ಹೇಳಿದ್ದಳಂತೆ. ರಾಜೇಶ್ ಸ್ನೇಹಿತರಿಗೆ 10 ಸಾವಿರ ಮೊದಲೇ ನೀಡಿದ್ದ ಆಯೆಷಾ 50 ಸಾವಿರ ನೀಡುವುದಾಗಿ ಹೇಳಿದ್ದಳಂತೆ. ಜೂನ್ 12ರಂದು ಗುಜರಾತಿನಿಂದ ಜಬಲ್ಪುರಕ್ಕೆ ಆರೋಪಿಗಳು ಬಂದಿದ್ದಾರೆ. ಸಂಜೆ ಶಫತ್ ಉಲ್ಲಾಹ್ ಹತ್ಯೆ ಮಾಡಿದ್ದಾರೆ. ವಿಚಾರಣೆ ನಂತ್ರ ಎಲ್ಲ ಸತ್ಯ ಬಾಯ್ಬಿಟ್ಟಿದ್ದಾರೆ. ಮೂವರನ್ನು ಬಂಧಿಸಲಾಗಿದ್ದು ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...