alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ 15 ವರ್ಷದ ಹುಡುಗ ಆತ್ಮಹತ್ಯೆಗೆ ಶರಣಾದ

ಬಿಹಾರದ ಗಯಾದಲ್ಲಿ ಎರಡು ಮಕ್ಕಳ ತಾಯಿ ರುಬಿ ಮತ್ತೆ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಒತ್ತಾಯಕ್ಕೆ ಎರಡನೇ ಮದುವೆಯಾದ ರುಬಿ, ಮಗನ ಸ್ಥಾನದಲ್ಲಿದ್ದ ಮೈದುನನನ್ನು ಕಳೆದುಕೊಂಡಿದ್ದಾಳೆ.

ರುಬಿ ಪತಿ ಸತೀಶ್ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಗಂಡನ ಮನೆಯವರು ರುಬಿಗೆ ಎರಡನೇ ಮದುವೆ ಮಾಡಲು ಮುಂದಾಗಿದ್ದರು.

ರುಬಿಗೆ ಬೇರೆ ವರನನ್ನು ಹುಡುಕುವ ಬದಲು ಸತೀಶ್ ತಮ್ಮ 15 ವರ್ಷದ ಮಹದೇವನಿಗೆ ರುಬಿಯನ್ನು ಮದುವೆ ಮಾಡಲು ಮುಂದಾಗಿದ್ದಾರೆ. ಮಹದೇವ್ 7 ವರ್ಷದಲ್ಲಿದ್ದಾಗ ರುಬಿ ಈ ಮನೆಗೆ ಸೊಸೆಯಾಗಿ ಬಂದಿದ್ದಳು. ಅಲ್ಲಿಂದ ಈವರೆಗೂ ರುಬಿ, ಮಹದೇವ್ ನನ್ನು ಮಗನಂತೆ ನೋಡಿಕೊಂಡಿದ್ದಳು. ಮಹದೇವ್ ಕೂಡ ರುಬಿಗೆ ತಾಯಿ ಸ್ಥಾನ ನೀಡಿದ್ದ.

ಕುಟುಂಬಸ್ಥರ ಒತ್ತಾಯದ ಮೇರೆಗೆ ಇಬ್ಬರು ಮದುವೆಗೆ ಒಪ್ಪಿದ್ದರು. ಆದ್ರೆ ಮದುವೆಯಾದ ಮಹದೇವ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರುಬಿ ಮತ್ತೆ ವಿಧವೆಯಾಗಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...