alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಸಂತ್ರಸ್ಥೆಗೆ ಪೊಲೀಸರು ಕೇಳೋ ಪ್ರಶ್ನೆನಾ ಇದು..?

rape

ಕೇರಳದಲ್ಲಿ ಪೊಲೀಸರೇ, ಸಾಮೂಹಿಕ ಅತ್ಯಾಚಾರ ಸಂತ್ರಸ್ಥೆಯನ್ನು ಅಪಹಾಸ್ಯ ಮಾಡಿದ್ದಾರೆ. ಪೊಲೀಸರು ಕೆಲವು ನೀಚ ಪ್ರಶ್ನೆಗಳನ್ನು ಕೇಳಿದ್ರಿಂದ ಆ ಮಹಿಳೆ ತಾನು ನೀಡಿದ್ದ ದೂರನ್ನೇ ಹಿಂಪಡೆದಿದ್ದಾಳೆ.

ಮಹಿಳೆಯೊಬ್ಬಳ ಮೇಲೆ ಆಕೆಯ ಪತಿಯ ಸ್ನೇಹಿತರೇ ಅತ್ಯಾಚಾರ ಮಾಡಿದ್ದರು. ಈ ಬಗ್ಗೆ ದೂರು ದಾಖಲಿಸಿ ಕಾಮುಕರನ್ನು ಬಂಧಿಸುವಂತೆ ಆಕೆ ಮನವಿ ಮಾಡಿಕೊಂಡಾಗ ತ್ರಿಶೂರ್ ಠಾಣೆಯ ಪೊಲೀಸರು ಅಸಂಬದ್ಧ ಪ್ರಶ್ನೆಗಳನ್ನು ಕೇಳಿದ್ದಾರೆ.

ಯಾರ ಜೊತೆ ನೀನು ಹೆಚ್ಚು ಎಂಜಾಯ್ ಮಾಡಿದೆ ಎಂದೆಲ್ಲ ಅಸಹ್ಯಕರ ಸವಾಲೆಸೆದಿದ್ದಾರೆ. ಇದ್ರಿಂದ ನೊಂದ ಮಹಿಳೆ ದೂರು ವಾಪಸ್ ಪಡೆದಿದ್ದಾರೆ ಅನ್ನೋ ವಿಚಾರವನ್ನು ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ಬಹಿರಂಗಪಡಿಸಿದ್ದಾರೆ.

ಆಕೆ 35 ವರ್ಷದ ಮಹಿಳೆ, ಅವಳಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಕುಡುಕ, ಒಂದು ದಿನ ರಾತ್ರಿ ಪ್ರತ್ಯಕ್ಷವಾದ ಅವನ ನಾಲ್ವರು ಸ್ನೇಹಿತರು ನಿನ್ನ ಪತಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾನೆಂದು ಸುಳ್ಳು ಹೇಳಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ನಗರದ ಹೊರ ವಲಯದಲ್ಲಿರುವ ಮನೆಯೊಂದಕ್ಕೆ ಕರೆದೊಯ್ದು ಅವಳ ಮೇಲೆ ಅತ್ಯಾಚಾರ ಮಾಡಿದ್ದಾರೆ.

ಅತ್ಯಾಚಾರ ದೃಶ್ಯವನ್ನು ವಿಡಿಯೋ ಮಾಡಿದ್ದು, ಈ ವಿಚಾರವನ್ನು ಬಾಯ್ಬಿಟ್ಟರೆ ಅದನ್ನು ಲೀಕ್ ಮಾಡುವುದಾಗಿ ಬೆದರಿಸಿದ್ದಾರೆ. ಆ ನಾಲ್ವರು ಕಾಮುಕರಲ್ಲಿ ಒಬ್ಬ ರಾಜಕಾರಣಿಯೂ ಇದ್ದ. 3 ತಿಂಗಳ ಬಳಿಕ ಧೈರ್ಯ ಮಾಡಿ ಪತಿಯೊಂದಿಗೆ ದೂರು ಕೊಡಲು ಹೋದಾಗ ಪೊಲೀಸರೇ ಇಂತಹ ಪ್ರಶ್ನೆಗಳನ್ನು ಕೇಳಿ ಅವಳನ್ನು ಅವಮಾನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...