alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ರಾತ್ರಿ ಪತ್ನಿಯನ್ನು ಮನೆಗೆ ಕಳುಹಿಸು ಎಂದ ಅಧಿಕಾರಿ

ಬರೇಲಿಯಲ್ಲಿ ಪೊಲೀಸ್ ಅಧಿಕಾರಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಅಧಿಕಾರಿ ವಿರುದ್ಧ ಹೋಂ ಗಾರ್ಡ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಿನಗಿಷ್ಟವಾಗುವ ಜಾಗದಲ್ಲಿ ಕೆಲಸ ಮಾಡಬೇಕು ಎಂದಾದ್ರೆ ನಿನ್ನ ಪತ್ನಿಯನ್ನು ಒಂದು ರಾತ್ರಿ ನನ್ನ ಜೊತೆ ಕಳುಹಿಸು ಎಂದು ಅಧಿಕಾರಿ ಹೇಳಿದ್ದಾನಂತೆ.

ಟ್ರಾಫಿಕ್ ಪೊಲೀಸ್ ಅಧಿಕಾರಿ ಜೊತೆ ಮಹಿಳೆಯೊಬ್ಬಳು ಗಲಾಟೆ ಮಾಡ್ತಿದ್ದಳು. ಶಬ್ಧ ಕೇಳಿ ಅಲ್ಲಿಗೆ ಬಂದ ಸಾರ್ವಜನಿಕರು ಏನೆಂದು ವಿಚಾರಿಸಿದ್ದಾರೆ. ಈ ವೇಳೆ ಮಹಿಳೆ ಅಧಿಕಾರಿ ಕರ್ಮಕಾಂಡವನ್ನು ಬಯಲಿಗೆಳೆದಿದ್ದಾಳೆ. ಹೋಂ ಗಾರ್ಡ್ ಪತಿ ದಿನೇಶ್ ಕರ್ತವ್ಯದ ಸ್ಥಳ ಬದಲಿಸುವಂತೆ ಅಧಿಕಾರಿಗೆ ಕೇಳಿದ್ದಾರಂತೆ. ಮೊದಲು ಹಣ ಕೇಳಿದ ಅಧಿಕಾರಿ ನಂತ್ರ ಪತ್ನಿಯನ್ನು ಒಂದು ರಾತ್ರಿ ಕಳಿಸುವಂತೆ ಕೇಳಿದ್ದಾನಂತೆ.

ಅಧಿಕಾರಿ ಆಲಮ್ ಮಾತನ್ನು ಪತ್ನಿ ಬಳಿ ಬಂದು ಹೇಳಿದ್ದಾರೆ ದಿನೇಶ್. ಇದ್ರಿಂದ ಕೋಪಗೊಂಡ ಪತ್ನಿ ಅಧಿಕಾರಿ ಆಲಮ್ ಬಳಿ ಬಂದಿದ್ದಾಳೆ. ಈ ವೇಳೆ ಆಲಮ್ ಕೆಟ್ಟ ಶಬ್ಧ ಬಳಸಿ ಮಾತನಾಡಿದ್ದಾನೆ ಎನ್ನಲಾಗಿದೆ. ಇದನ್ನು ಯಾರೋ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡ್ತಿರೋದನ್ನು ನೋಡ್ತಿದ್ದಂತೆ ಆಲಮ್ ವರಸೆ ಬದಲಿಸಿದ್ದಾನೆ. ದಿನೇಶ್ ವಿರುದ್ಧವೇ ದೂರು ದಾಖಲಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...