alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ಜೊತೆ ಚಾಟ್ ಮಾಡುತ್ತಲೇ ನೇಣಿಗೆ ಶರಣಾದ್ಲು ವಿದ್ಯಾರ್ಥಿನಿ

ಹನ್ನೆರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು, ತನ್ನ ಬಾಯ್ ಫ್ರೆಂಡ್ ಜೊತೆ ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡುತ್ತಲೇ ನೇಣಿಗೆ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದ ಸೋನರ್ಪುರ್ ನಲ್ಲಿ ನಡೆದಿದೆ.

ಮೌಸುಮ್ ಮಿಸ್ತ್ರಿ ದುರಂತ ಸಾವು ಕಂಡ ವಿದ್ಯಾರ್ಥಿನಿಯಾಗಿದ್ದು, ಈಕೆ ಶನಿವಾರದಂದು ಮನೆಯಿಂದ ಹೊರ ತೆರಳಿದ್ದು ರಾತ್ರಿ 10 ಗಂಟೆ ಸುಮಾರಿಗೆ ಮರಳಿ ಬಂದಿದ್ದಾಳೆ. ಅನ್ಯಮನಸ್ಕಳಾಗಿದ್ದ ಕಾರಣ ಪೋಷಕರೂ ಆಕೆಯನ್ನು ಹೆಚ್ಚು ಪ್ರಶ್ನಿಸಲು ಹೋಗಿಲ್ಲ.

ತನ್ನ ರೂಮಿಗೆ ಹೋದ ಮೌಸುಮ್ ಮಿಸ್ತ್ರಿ ಬಹು ಹೊತ್ತಿನವರೆಗೂ ತನ್ನ ಬಾಯ್ ಫ್ರೆಂಡ್ ಜೊತೆ ಚಾಟ್ ಮಾಡಿದ್ದಾಳೆ. ಬಳಿಕ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಮರುದಿನ ಆಕೆ ಎಷ್ಟು ಹೊತ್ತಾದರೂ ಏಳದ ಕಾರಣ ಪೋಷಕರು ನೋಡಿದ ವೇಳೆ ಸಾವನ್ನಪ್ಪಿರುವುದು ಕಂಡುಬಂದಿದೆ. ತಮ್ಮ ಪುತ್ರಿಯ ಸಾವಿಗೆ ಆಕೆಯ ಗೆಳೆಯ ನೀಡಿರುವ ಕಿರುಕುಳವೇ ಕಾರಣವೆಂದು ಆರೋಪಿಸಿರುವ ಪೋಷಕರು, ಮೌಸುಮ್ ಮಿಸ್ತ್ರಿ ಬಳಸುತ್ತಿದ್ದ ಎರಡು ಮೊಬೈಲ್ ಫೋನ್ ಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...