alex Certify
ಕನ್ನಡ ದುನಿಯಾ       Mobile App
       

Kannada Duniya

ಆಕೆಗೆ ಕಂಡಿತ್ತು ಬೆಡ್ ರೂಂ ಗೋಡೆಯಲ್ಲಿದ್ದ ರಹಸ್ಯ ಕ್ಯಾಮೆರಾ

camr my

ಮೈಸೂರು: ಕಾಮುಕರು ಹೇಗೆಲ್ಲಾ ಇರುತ್ತಾರೆ ಎಂಬುದನ್ನು ಹಲವು ಘಟನೆಗಳಲ್ಲಿ ಓದಿರುತ್ತೀರಿ. ಇಲ್ಲೊಬ್ಬ ಕಾಮುಕ ಪಕ್ಕದ ಮನೆಯ ಬೆಡ್ ರೂಂಗೆ, ಕ್ಯಾಮೆರಾ ಮೊಬೈಲ್ ಅಳವಡಿಸಿ ಅಲ್ಲಿನ ದೃಶ್ಯಗಳನ್ನು ಕದ್ದು ನೋಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಮೈಸೂರಿನ ಸಾಹುಕಾರ ಹುಂಡಿಯ ನಿವಾಸಿಯಾಗಿರುವ 35 ವರ್ಷದ ಕಾಮುಕ, ಕೆಲಸದ ನಿಮಿತ್ತ ಬೋಗಾದಿ ಗುಂಡಿ ಬಡಾವಣೆಯಲ್ಲಿ ವಾಸವಾಗಿದ್ದು, ತನ್ನ ಮನೆಗೆ ಹೊಂದಿಕೊಂಡಂತೆ ಇದ್ದ ಪಕ್ಕದ ಮನೆಯ ಗೋಡೆಯನ್ನು ಕೊರೆದು ಸಣ್ಣ ರಂಧ್ರ ಮಾಡಿದ್ದಾನೆ. ಅದರಲ್ಲಿ ತನ್ನ ಮೊಬೈಲ್ ಕ್ಯಾಮೆರಾ ಫಿಕ್ಸ್ ಮಾಡಿ, ಪಕ್ಕದ ಮನೆಯ ಬೆಡ್ ರೂಮಿನಲ್ಲಿ ನಡೆಯುತ್ತಿದ್ದ ದೃಶ್ಯಗಳನ್ನೆಲ್ಲಾ ನೋಡಿ ವಿಕೃತ ಸಂತೋಷಪಡುತ್ತಿದ್ದ ಎನ್ನಲಾಗಿದೆ.

ಗೋಡೆಯಲ್ಲಿದ್ದ ಸಣ್ಣ ರಂಧ್ರವೊಂದನ್ನು ಗಮನಿಸಿದ ಯುವತಿ ತಂದೆಗೆ ವಿಷಯ ತಿಳಿಸಿದ್ದಾಳೆ. ವಿಕೃತ ಕಾಮಿ ಮನೆಗೆ ಬಂದ ಸಂದರ್ಭದಲ್ಲಿ ಅವರು ಒಳಹೋಗಿ ನೋಡಿದಾಗ ನಿಜ ಸಂಗತಿ ಬಯಲಾಗಿದೆ. ಕಾಮುಕ ತನ್ನ ಮನೆಯ ಅಟ್ಟದ ಮೇಲಿನ ಗೋಡೆಯಿಂದ ಇವರ ಮನೆಯ ಬೆಡ್ ರೂಂ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಕದ್ದು ನೋಡಿರುವುದು ಗೊತ್ತಾಗಿದೆ. ಸರಸ್ವತಿಪುರಂ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...