alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಸಾರ್ವಜನಿಕ ಸ್ಥಳದಲ್ಲೇ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಬೆಚ್ಚಿಬೀಳಿಸುವಂತಿದೆ. ಸಾರ್ವಜನಿಕ ಸ್ಥಳದಲ್ಲೇ ವ್ಯಕ್ತಿಯೋರ್ವ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಮೊದಲಿಗೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತಾದಿಂದ 50 ಕಿಮೀ ದೂರದಲ್ಲಿರುವ ಚಿನ್ಸೂರಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿತ್ತಾದರೂ ಬಳಿಕ ಸ್ಪಷ್ಟೀಕರಣ ಹೊರಬಿದ್ದಿದ್ದು, ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿಲ್ಲ ಎನ್ನಲಾಗಿದೆ.

ಈ ಘಟನೆ ಭಾರತದ ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದು ಬಹಿರಂಗವಾಗಿಲ್ಲವಾದರೂ ಅದರಲ್ಲಿ ಸೆರೆಯಾಗಿರುವ ದೃಶ್ಯ ಮಾತ್ರ ಎಲ್ಲರಲ್ಲೂ ಆಕ್ರೋಶ ಹುಟ್ಟು ಹಾಕಿದೆ. ನೂರಾರು ಜನರು ನೆರೆದಿರುವ ಸ್ಥಳದಲ್ಲೇ ಕಾಮಕ ನೀಚ ಕೃತ್ಯವೆಸಗಿದ್ದಾನೆ. ಈ ವಿಡಿಯೋವನ್ನು ಸಾವಿರಾರು ಮಂದಿ ಶೇರ್ ಮಾಡಿದ್ದು, ನೀಚ ಕೃತ್ಯವೆಸಗಿದವನ ಮಾಹಿತಿಯನ್ನು ಪೊಲೀಸರಿಗೆ ನೀಡುವಂತೆ ಕೋರುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...