alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ, ಪುತ್ರಿಯ ಮೇಲೆ ಮೃಗೀಯ ವರ್ತನೆ ತೋರಿದ ಕಿರಾತಕ

ವಿಜಯಪುರ: ಬೆಳಗಿನ ಜಾವ ಮದ್ಯಸೇವನೆಗೆ ಪತ್ನಿ ಹಣ ಕೊಡಲಿಲ್ಲವೆಂದು ಪತಿರಾಯನೊಬ್ಬ ಮೃಗೀಯವಾಗಿ ವರ್ತಿಸಿದ್ದಾನೆ.

ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಕಲಕೇರಿಯಲ್ಲಿ ವ್ಯಕ್ತಿಯೊಬ್ಬ ಮದ್ಯಸೇವನೆಗೆ ಹಣ ಕೊಡದ ಕಾರಣ, ಪತ್ನಿ ಹಾಗೂ 6 ವರ್ಷದ ಪುತ್ರಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ.

ರಾಜೇಸಾಬ್(38) ಎಂಬಾತನೇ ಇಂತಹ ಕೃತ್ಯವೆಸಗಿದವ. 28 ವರ್ಷದ ಪತ್ನಿ ಹಾಗೂ 6 ವರ್ಷದ ಪುತ್ರಿಯ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದಾನೆ. ಪತ್ನಿಯ ಕಿವಿ, ಕುತ್ತಿಗೆ, ದೇಹದ ಭಾಗಗಳಿಗೆ ಗಾಯಗಳಾಗಿದ್ದು, ಪುತ್ರಿಯ ಬಲಗೈ ಬೆರಳು ಕಟ್ ಆಗಿವೆ.

ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಕಲಕೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...