alex Certify
ಕನ್ನಡ ದುನಿಯಾ       Mobile App
       

Kannada Duniya

OMG: ಜೈಲಿನಲ್ಲಿ ವೀರ್ಯ ಖರೀದಿಸಿದ ಮಹಿಳೆ

female-jail-cell

ವಿಯಟ್ನಾಂನಲ್ಲೊಂದು ಬಹಳ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ ಒಬ್ಬ ಮಹಿಳೆ ಮಾದಕವಸ್ತು ಕಳ್ಳಸಾಗಣೆ ಆರೋಪದ ಹಿನ್ನೆಲೆಯಲ್ಲಿ ಮರಣದಂಡನೆಗೆ ಗುರಿಯಾಗಿದ್ದಳು. ಇದರಿಂದ ತಪ್ಪಿಸಿಕೊಳ್ಳಲು ಮಹಿಳೆ ಹುಡುಕಿದ ಉಪಾಯ ಕೇಳಿದ್ರೆ ಆಶ್ಚರ್ಯವಾಗುವುದು ನಿಶ್ಚಿತ.

42 ವರ್ಷದ ಮಹಿಳೆಯನ್ನು 2012 ರಲ್ಲಿ ಬಂಧಿಸಲಾಗಿತ್ತು. 2014 ರಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಆದ್ರೆ ಆ ವೇಳೆ ಸಲ್ಲಿಸಿದ ಮೇಲ್ಮನವಿ ಕೇಳಿ ನ್ಯಾಯಾಲಯ ಕಂಗಾಲಾಗಿತ್ತು. ಜೈಲಿನಲ್ಲಿದ್ದ ಮಹಿಳೆ, ಜೈಲಿನಲ್ಲಿದ್ದ ಪುರುಷ ಖೈದಿಯೊಬ್ಬನಿಗೆ ಪ್ಲಾಸ್ಟಿಕ್ ಚೀಲದಲ್ಲಿ ವೀರ್ಯ ಹಾಗೂ ಒಂದು ಸಿರಿಂಜ್ ತರುವಂತೆ ಕೇಳಿದ್ದಾಳೆ.

ಗರ್ಭಿಣಿಯಾಗಲು ಸಹಾಯ ಮಾಡಿದ ಕೈದಿಗೆ ಮಹಿಳೆ 1600 ಪೌಂಡ್ ನೀಡಿದ್ದಾಳಂತೆ. ಆ ಕೈದಿ ಎರಡು ಬಾರಿ ವೀರ್ಯ ನೀಡಿದ್ದಾನಂತೆ. ಇನ್ನೆರಡು ತಿಂಗಳಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಲಿದ್ದಾಳೆ. ಹಾಗಾಗಿ ಅವಳ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಾಯಿಸಲಾಗಿದೆ.

ಇದು ಮೊದಲನೆಯ ಪ್ರಕರಣವಲ್ಲ. ಈ ಹಿಂದೆ ಕೂಡ 2005 ರಲ್ಲಿ ಇಂತಹದ್ದೇ ಒಂದು ಪ್ರಕರಣ ವಿಯೆಟ್ನಾಂನಲ್ಲಿ ಬೆಳಕಿಗೆ ಬಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...