alex Certify
ಕನ್ನಡ ದುನಿಯಾ       Mobile App
       

Kannada Duniya

ಲೂಟಿ ಮಾಡಲು ಬಂದಿದ್ದ ನಕಲಿ ಐಟಿ ಅಧಿಕಾರಿಗಳಿಗೆ ಗೂಸಾ

ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ಮನೆಯಿಂದ ಹಣ, ಆಭರಣ ಲೂಟಿ ಮಾಡಲು ಸ್ಕೆಚ್ ಹಾಕಿದ್ದ ಖದೀಮರು ಭರ್ತಿ ಗೂಸಾ ತಿಂದಿದ್ದಾರೆ. ಹರಿಯಾಣ ಸರ್ಕಾರದ ಸ್ಟಿಕ್ಕರ್ ಅಂಟಿಸಿಕೊಂಡು ಕಾರಿನಲ್ಲಿ ಬಂದ 6 ಮಂದಿ, ದೆಹಲಿಯ ಉದ್ಯಮಿಯೊಬ್ಬನ ಮನೆ ಬಾಗಿಲು ತಟ್ಟಿದ್ರು.

ತಾವು ಐಟಿ ಅಧಿಕಾರಿಗಳು, 20 ಕೋಟಿ ತೆರಿಗೆ ವಂಚನೆ ಬಗ್ಗೆ ತನಿಖೆ ಮಾಡಲು ಬಂದಿದ್ದೇವೆ ಅಂತಾ ಹೇಳಿ ದಂಪತಿಯ ಬಳಿಯಿದ್ದ ಫೋನ್ ಕಿತ್ತುಕೊಂಡ್ರು. ಇವರ ಮೇಲೆ ಅನುಮಾನಗೊಂಡ ಮನೆಯ ಸದಸ್ಯನೊಬ್ಬ ಸಹಾಯಕ್ಕಾಗಿ ಕೂಗಿಕೊಂಡಿದ್ದ.

ಕೂಡಲೇ 150ಕ್ಕೂ ಹೆಚ್ಚು ಸ್ಥಳೀಯರು ಅಲ್ಲಿ ಜಮಾಯಿಸಿದ್ರು. 6 ಜನ ನಕಲಿ ಅಧಿಕಾರಿಗಳನ್ನು ಹಿಡಿದು ಚೆನ್ನಾಗಿ ತದುಕಿದ್ರು. ಬಳಿಕ ಆರೋಪಿಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಮಾಳ್ವಿಯಾ ನಗರದಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಈ ಘಟನೆ ನಡೆದಿದೆ.

ಓರ್ವ ಮನೆಯ ಹೊರಗೆ ಕಾರು ನಿಲ್ಲಿಸಿಕೊಂಡು ಸಹಚರರಿಗಾಗಿ ಕಾಯುತ್ತಿದ್ದ. ಹಣ ಒಡವೆ ಜೊತೆಗೆ ಎಸ್ಕೇಪ್ ಆಗೋದು ಅವರ ಪ್ಲಾನ್ ಆಗಿತ್ತು. ಆರೋಪಿಗಳಲ್ಲಿ ಯಾರಾದ್ರೂ ಈ ಹಿಂದೆ ಐಟಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ರಾ ಎಂಬ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಉದ್ಯಮಿ ಮನೆಯಿಂದ ಲೂಟಿ ಮಾಡಲು ಯತ್ನಿಸಿದ್ದ 20 ಲಕ್ಷ ರೂಪಾಯಿ ಹಣವನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...