alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ನ್ಯೂಡ್ ಫೋಟೋ ಕೇಳಿದ್ದ ಮುನಿ

ಮುನಿ ಶಾಂತಿಸಾಗರ ಅತ್ಯಾಚಾರವೆಸಗಿದ್ದಾನೆಂದು ದೂರು ನೀಡಿರುವ ಹುಡುಗಿ ಎಲ್ಲರ ಮುಂದೆ ಬಂದಿದ್ದಾಳೆ. ಶಾಂತಿಸಾಗರ, ಸುಖ-ಶಾಂತಿಯ ಪಾಠ ಮಾಡುವ ನೆಪದಲ್ಲಿ ನ್ಯೂಡ್ ಫೋಟೋ ವಾಟ್ಸಾಪ್ ನಲ್ಲಿ ಕಳಿಸುವಂತೆ ಒತ್ತಾಯಿಸಿದ್ದಾನೆ. ತಂದೆ-ತಾಯಿ, ಕುಟುಂಬಸ್ಥರ ಯಶಸ್ಸು, ಸಂತೋಷದ ನೆಪ ಹೇಳಿ ಬೆದರಿಕೆಯೊಡ್ಡಿ ದೈಹಿಕ ಸಂಪರ್ಕ ಬೆಳೆಸಿದ್ದಾನೆಂದು ಪೀಡಿತೆ ಹೇಳಿದ್ದಾಳೆ.

19 ವರ್ಷದ ಪೀಡಿತೆ ಪ್ರಕಾರ ಮಾರ್ಚ್ 31ರಂದು ಮಾಂಡವಿಯಲ್ಲಿ ಮೊದಲ ಬಾರಿ ಆಕೆ ಮುನಿಯನ್ನು ಭೇಟಿಯಾಗಿದ್ದಳಂತೆ. ಪ್ರವಚನಕ್ಕೆ ನಾನು ಮಂತ್ರಮುಗ್ದಳಾಗಿದ್ದೆ ಎಂದು ಪೀಡಿತೆ ಹೇಳಿದ್ದಾಳೆ. ನನಗೆ ಶಿಷ್ಯೆಯಾಗುವಂತೆ ಒತ್ತಾಯಿಸಿದ್ದಾರೆ. ನಂತ್ರ ಧಾರ್ಮಿಕ ಶಿಕ್ಷಣ ಶುರುಮಾಡಿದ್ದಾರೆ. ನಿಧಾನವಾಗಿ ವಾಟ್ಸಾಪ್ ಹಾಗೂ ಮೆಸ್ಸೇಜ್ ಕಳುಹಿಸಲು ಶುರುಮಾಡಿದ್ದಾನೆ. ಸುಖ-ಶಾಂತಿಗಾಗಿ ಜಪ ಮಾಡುವಂತೆ ಒತ್ತಾಯಿಸಿದ್ದಾನೆ. ಮಧ್ಯೆ ಫೋನ್ ಕೂಡ ಮಾಡ್ತಿದ್ದ.

ನಿನ್ನ ಕುಟುಂಬಸ್ಥರು ಹಾಗೂ ನಿನ್ನ ಭವಿಷ್ಯಕ್ಕಾಗಿ ಪೂಜೆ ಮಾಡಿಸಬೇಕು. ನಿನ್ನ ಫೋಟೋ ಕಳುಹಿಸು ಎಂದಿದ್ದನಂತೆ. ವಾಟ್ಸಾಪ್ ನಲ್ಲಿ ಹುಡುಗಿ ಫೋಟೋ ಕಳುಹಿಸಿದ್ದಾಳಂತೆ. ನಂತ್ರ ನನ್ನನ್ನು ಸ್ನೇಹಿತನಂತೆ ಭಾವಿಸು. ನಿನ್ನ ನ್ಯೂಡ್ ಫೋಟೋ ಕಳುಹಿಸು. ಪೂಜೆಗೆ ಅದ್ರ ಅವಶ್ಯಕತೆಯಿದೆ ಎಂದಿದ್ದನಂತೆ. ಅದಾದ ನಂತ್ರ ಪದೇ ಪದೇ ವಾಟ್ಸಾಪ್ ಮಾಡಿದ್ದಾನಂತೆ.

ಚಾತುರ್ಮಾಸದ ವೇಳೆ ಸೂರತ್ ಗೆ ಹೋಗಿದ್ದರಂತೆ ಕುಟುಂಬಸ್ಥರು. ಈ ವೇಳೆ ತಂದೆ- ತಾಯಿಗೆ ಬೇರೆ ರೂಂ, ಸಹೋದರನಿಗೆ ಹಾಗೂ ಪೀಡಿತೆಗೆ ಬೇರೆ ರೂಂ ನೀಡಿದ್ದರಂತೆ. ನವಿಲುಗರಿ ಹಿಡಿದು ಹುಡುಗಿ ಮೈ ಮೇಲೆ ಎಳೆದು ಕರೆದುಕೊಂಡು ಹೋಗಿದ್ದನಂತೆ. ನೀನು ಏನು ಬಯಸ್ತಿಯಾ ಎಂದು ಹುಡುಗಿಗೆ ಕೇಳಿದ್ದನಂತೆ. ತಂದೆ- ತಾಯಿ ಸುಖ ಎಂದು ಪೀಡಿತೆ ಉತ್ತರಿಸಿದ್ದಳಂತೆ. ಹಾಗಾದ್ರೆ ನನ್ನೊಂದಿಗೆ ಸಹಕರಿಸು ಎಂದ ಮುನಿ ವಿರೋಧ ಮಾಡಿದ್ರೆ ತಂದೆ-ತಾಯಿ ಸಾಯ್ತಾರೆ ಎಂದಿದ್ದನಂತೆ. ಸಂಬಂಧ ಬೆಳೆಸಿದ ನಂತ್ರ ಯಾರ ಬಳಿಯೂ ಇದನ್ನು ಹೇಳಬೇಡ ಎಂದು ಬೆದರಿಸಿದ್ದನಂತೆ.

ಮಾರನೇ ದಿನ ಪೀಡಿತೆ ತನ್ನ ಕುಟುಂಬಸ್ಥರಿಗೆ ವಿಷ್ಯ ತಿಳಿಸಿದ್ದಳಂತೆ. ಅವರು ಕೌನ್ಸಲಿಂಗ್, ವೈದ್ಯಕೀಯ ಪರೀಕ್ಷೆ ನಡೆಸಿದ ನಂತ್ರ ಸೂರತ್ ಪೊಲೀಸರಿಗೆ ದೂರು ನೀಡಿದ್ದಾರಂತೆ. ಈ ಎಲ್ಲ ವಿಷ್ಯವನ್ನು ಪೀಡಿತೆ ಕಾನೂನು ಸಲಹೆಗಾರ, ಸ್ತ್ರೀರೋಗ ತಜ್ಞ ಭಾಸ್ಕರ್ ಎಂಬುವವರಿಗೆ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...