alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿ ಮಾವನಿಗೆ ಸೊಸೆ ಕೊಟ್ಟ ಶಿಕ್ಷೆಯೇನು…?

ತನ್ನ ಮೇಲೆ ಅತ್ಯಾಚಾರವೆಸಗಿದ ಮಾವನನ್ನು ಸೊಸೆಯೇ ಹತ್ಯೆ ಮಾಡಿದ್ದಾಳೆ. ಲಖ್ನೋನಲ್ಲಿ ಈ ಕೃತ್ಯ ನಡೆದಿದ್ದು,  26 ವರ್ಷದ ಮಹಿಳೆ ಮೇಲೆ ಆಕೆಯ ಮಾವ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದ.

ಶುಕ್ರವಾರ ಮಗ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆತ ಸೊಸೆಯ ಮೇಲೆ ಅತ್ಯಾಚಾರ ಮಾಡಿದ್ದ. ಶನಿವಾರ ಕೂಡ ತನ್ನ ಹೇಯ ಕೃತ್ಯವನ್ನು ಮುಂದುವರಿಸಿದ್ದ. ತಂದೆಯೇ ತನ್ನ ಪತ್ನಿ ಮೇಲೆ ದೌರ್ಜನ್ಯ ನಡೆಸಿರೋದನ್ನು ಮಗ ಕಣ್ಣಾರೆ ಕಂಡಿದ್ದಾನೆ.

ಕೆರಳಿದ ಮಗ, ಸೊಸೆ ಇಬ್ಬರೂ ಸೇರಿ ಕೋಲಿನಿಂದ ವ್ಯಕ್ತಿಗೆ ಥಳಿಸಿದ್ದಾರೆ. ಏಟು ತಾಳಲಾರದೇ ಆತ ಮೃತಪಟ್ಟಿದ್ದಾನೆ. ಮೃತನ ಹಿರಿಯ ಮಗ ಪೊಲೀಸರಿಗೆ ದೂರು ನೀಡಿದ್ದ. ಆರೋಪಿ ದಂಪತಿ ಈಗಾಗ್ಲೇ ಪೊಲೀಸರಿಗೆ ಶರಣಾಗಿದ್ದಾರೆ. ಮೃತನ ಪತ್ನಿ 4 ವರ್ಷಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...