alex Certify
ಕನ್ನಡ ದುನಿಯಾ       Mobile App
       

Kannada Duniya

ಚರಂಡಿಯಲ್ಲಿ ಪತ್ತೆಯಾಯ್ತು ಸಬ್ ಇನ್ಸ್ ಪೆಕ್ಟರ್ ಶವ…!

ಉತ್ತರ ಪ್ರದೇಶದಲ್ಲಿ ಪೊಲೀಸರ ಜೀವಕ್ಕೂ ರಕ್ಷಣೆ ಇಲ್ಲವಾ ಎಂಬ ಪ್ರಶ್ನೆ ಈಗ ಮೂಡಿದೆ. ಸಾದರ್ ಬಜಾರ್ ಪೊಲೀಸ್ ಸ್ಟೇಷನ್ ನ ವ್ಯಾಪ್ತಿಯಲ್ಲಿ ಸಬ್ ಇನ್ಸ್ ಪೆಕ್ಟರ್ ಒಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

ಮೆಹರ್ಬಾನ್ ಅಲಿಯವರ ಶವ ಚರಂಡಿಯ ಬಳಿ ಪತ್ತೆಯಾಗಿದೆ. ಕತ್ತಿನ ಸುತ್ತಲೂ ಗಾಯದ ಗುರುತುಗಳಿದ್ದು ಅಲಿಯವರನ್ನ ಕೊಲೆ ಮಾಡಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಉತ್ತರ ಪ್ರದೇಶದ ಮುಜಾಫರ್ ನಗರ ಮೂಲದವರಾದ ಅಲಿ, ಶಹಜಾನ್ಪುರದ ಮೀಸಲು ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.

ಸಾದರ್ ಬಜಾರ್ ನ ಸಾರ್ವಜನಿಕರೊಬ್ಬರು ಅಲಿಯವರ ಮೃತದೇಹವನ್ನ ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಲಿಯವರ ಶವ ದೊರೆತ ಸ್ಥಳದಲ್ಲೇ ಮೋಟಾರ್ ಸೈಕಲ್ ಒಂದು ಪತ್ತೆಯಾಗಿದೆ.  ಮೆಹರ್ಬಾನ್ ಅಲಿಯವರ ಪುತ್ರಿ ಸನಾ ಚೌಧರಿ 2018 ರ ಮೇನಲ್ಲಿ ಕೊಲೆಯಾಗಿದ್ದರು. ಈ ಪ್ರಕರಣದಲ್ಲಿ ಆರೋಪಿಯೊಬ್ಬನನ್ನ ಬಂಧಿಸಲಾಗಿತ್ತು. ಆ ಪ್ರಕರಣಕ್ಕೂ ಮತ್ತು ಅಲಿಯವರ ಕೊಲೆಗೂ ಏನಾದ್ರು ಸಂಬಂಧ ಇದೆಯಾ ಅನ್ನೋ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...