alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಗಾರದಂಗಡಿಯಲ್ಲಿ ಇಬ್ಬರ ಹತ್ಯೆ

matura

ಉತ್ತರ ಪ್ರದೇಶದ ಮಥುರಾದಲ್ಲಿ ಬಂಗಾರದಂಗಡಿಯೊಂದರ ಮೇಲೆ ದುಷ್ಕರ್ಮಿಗಳು ಗುಂಡಿನ ಮಳೆಗೈದಿದ್ದಾರೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸೋಮವಾರ ರಾತ್ರಿ ದುಷ್ಕರ್ಮಿಗಳು ಇಬ್ಬರನ್ನು ಕೊಲೆ ಮಾಡಿದ್ದಾರೆ. ಹತ್ಯೆ ನಂತ್ರ ಬಂಗಾರ ಹಾಗೂ ಹಣವನ್ನು ಲೂಟಿ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.

ವಿಕಾಸ್ ಹಾಗೂ ಮೇಘ್ ಹೆಸರಿನ ಇಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅಂಗಡಿ ಮಾಲೀಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಂಗಡಿಯಲ್ಲಿದ್ದ ಇಬ್ಬರು ಗ್ರಾಹಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷ್ಯ ತಿಳಿಯುತ್ತಿದ್ದಂತೆ ಬಂಗಾರದಂಗಡಿ ಮುಂದೆ ಜನರು ಗಲಾಟೆ ಶುರುಮಾಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

ರಾತ್ರಿ ಸುಮಾರು 8 ಗಂಟೆಗೆ ಘಟನೆ ನಡೆದಿದೆ. ಘಟನೆ ನಡೆದ ಅಂಗಡಿ ಜನನಿಬಿಡ ಪ್ರದೇಶದಲ್ಲಿದ್ದು ಆ ವೇಳೆ ಜನ ಓಡಾಡ್ತಾ ಇದ್ದರು ಎನ್ನಲಾಗಿದೆ. ಈ ನಡುವೆಯೂ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ, ಆಭರಣ ದೋಚಿ ದುಷ್ಕರ್ಮಿಗಳು ಹೇಗೆ ಪರಾರಿಯಾಗಿದ್ದಾರೆಂಬ ಪ್ರಶ್ನೆ ಮನೆ ಮಾಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...