alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತನನ್ನು ಹುಡುಗ್ರು ಹೊಡೆದು ಕೊಲೆ ಮಾಡಿದ್ದೇಕೆ ಗೊತ್ತಾ?

ಉತ್ತರ ಪ್ರದೇಶದ ಆಲಿಗಢದಲ್ಲಿ 12 ವರ್ಷದ ದಲಿತ ಬಾಲಕನನ್ನು ಹೊಡೆದು ಕೊಲೆ ಮಾಡಲಾಗಿದೆ. ಕೃಷ್ಣ ಜನ್ಮಾಷ್ಠಮಿ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹಾಕಿದ್ದ ಆಕಾಶಬುಟ್ಟಿ ಮುಟ್ಟಿದ್ದೇ ಇದಕ್ಕೆ ಕಾರಣವಾಗಿದೆ. ಐವರು ಹುಡುಗ್ರ ವಿರುದ್ಧ ದೂರು ದಾಖಲಾಗಿದೆ.

ಘಟನೆ ನಾದರೋಡ್ ಗ್ರಾಮದಲ್ಲಿ ನಡೆದಿದೆ. ದಲಿತ ಹುಡುಗ ಆಕಾಶಬುಟ್ಟಿ ಮುಟ್ಟಿದ್ದಾನೆಂಬ ಸಣ್ಣ ಕಾರಣಕ್ಕೆ ಐವರು ಅಪ್ರಾಪ್ತರು ಆತನಿಗೆ ಹೊಡೆದಿದ್ದಾರಂತೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ಮುಂದಿನ ಕ್ರಮವೆಂದು ಪೊಲೀಸರು ಹೇಳಿದ್ದಾರೆ.

ದೇವಸ್ಥಾನಕ್ಕೆ ಮೃತ ಬಾಲಕ ಹಾಗೂ ಆತನ ಸ್ನೇಹಿತ ಬಂದಿದ್ದರಂತೆ. ಈ ವೇಳೆ ದೇವಸ್ಥಾನದಲ್ಲಿ ಹಾಕಿದ್ದ ಆಕಾಶಬುಟ್ಟಿಯನ್ನು ಬಾಲಕ ಮುಟ್ಟಿದ್ದಾನೆ. ಕೋಪಗೊಂಡ ಐವರು ಬಾಲಕರು ಆತನಿಗೆ ಹೊಡೆಯಲು ಶುರು ಮಾಡಿದ್ದಾರೆ. ಕೈ, ಕಾಲು, ಹೊಟ್ಟೆಗೆ ಹೊಡೆದಿದ್ದಾರಂತೆ. ವಿಷ್ಯ ಗೊತ್ತಾಗಿ ತಾಯಿ ದೇವಸ್ಥಾನಕ್ಕೆ ಬಂದಾಗ ಬಾಲಕ ನೆಲದ ಮೇಲೆ ಬಿದ್ದಿದ್ದನಂತೆ.

ಮನೆಗೆ ಕರೆದೊಯ್ದು ವಿಷ್ಯವನ್ನು ಗ್ರಾಮಸ್ಥರಿಗೆ ಹೇಳಿದ್ದಾಳೆ. ಆದ್ರೆ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ರಾತ್ರಿ ಹೊಟ್ಟೆ ನೋವು ಜಾಸ್ತಿಯಾದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಚಿಕಿತ್ಸೆ ನೀಡಿದ್ರೂ ಬಾಲಕ ಬದುಕಲಿಲ್ಲವೆಂದು ವೈದ್ಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...