alex Certify
ಕನ್ನಡ ದುನಿಯಾ       Mobile App
       

Kannada Duniya

ಪುರುಷ ವೇಶ್ಯೆಯ ಸಂಗ ಮಾಡಿ ಪ್ರಾಣ ಕಳೆದುಕೊಂಡ ವೃದ್ಧ

blood_knife_by_holyramsele

ಅವನೊಬ್ಬ ಪುರುಷ ವೇಶ್ಯೆ, 68 ವರ್ಷದ ವ್ಯಕ್ತಿಯೊಬ್ಬನ ಗುಪ್ತಾಂಗವನ್ನೇ ಕತ್ತರಿಸಿ ಆತನ ಸಾವಿಗೆ ಕಾರಣನಾಗಿದ್ದಾನೆ. ಅಮೆರಿಕದ ನ್ಯೂಯಾರ್ಕ್ ನಗರದ ಕ್ಲೇರ್ ಮೌಂಟ್ ಅಪಾರ್ಟ್ ಮೆಂಟ್ ಒಂದರಲ್ಲಿ ಈ ಕೃತ್ಯ ನಡೆದಿದೆ. ಲೈಂಗಿಕ ಕ್ರಿಯೆ ಬಳಿಕ ಹಣ ಕೊಡಲು ನಿರಾಕರಿಸಿದ್ದರಿಂದ ಕೊಲೆ ಮಾಡಿರೋದಾಗಿ ಆರೋಪಿ ಜೆರ್ರಿ ಪಗನ್ ತಿಳಿಸಿದ್ದಾನೆ.

68 ವರ್ಷದ ವ್ಯಕ್ತಿ ರಕ್ತಸಿಕ್ತವಾಗಿ ಬಾತ್ ಟಬ್ ನಲ್ಲಿ ಸತ್ತು ಬಿದ್ದಿದ್ದ. ಕತ್ತರಿಯಿಂದ ಆತನ ಗುಪ್ತಾಂಗವನ್ನು ಕತ್ತರಿಸಿರೋದಾಗಿ ಜೆರ್ರಿ ಪೊಲೀಸರ ಬಳಿ ಹೇಳಿದ್ದಾನೆ. ಆದ್ರೆ ಅಡುಗೆ ಮನೆಯಲ್ಲಿ ಚಾಕುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಹಾಗಾಗಿ ಚಾಕುವಿನಿಂದ್ಲೇ ಜೆರ್ರಿ ಹತ್ಯೆ ಮಾಡಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ.

ಈ ಭೀಕರ ಕೃತ್ಯವನ್ನು ಸೆಕೆಂಡ್ ಡಿಗ್ರಿ ಕೊಲೆಯೆಂದು ಪ್ರಕರಣ ದಾಖಲಿಸಿರೋ ಪೊಲೀಸರು ಕಾಮುಕ ಜೆರ್ರಿಯನ್ನು ಬಂಧಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...