alex Certify
ಕನ್ನಡ ದುನಿಯಾ       Mobile App
       

Kannada Duniya

4 ವರ್ಷದ ಮಗುವನ್ನು ಕುದಿಯುವ ನೀರಿನಲ್ಲಿ ಮುಳುಗಿಸಿದ ಮಲತಾಯಿ

Anna-Ritchie

ಮಕ್ಕಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಅವರ ಆಟ, ನೋಟಕ್ಕೆ ಮನ ಸೋಲದವರೇ ಇಲ್ಲ. ಸ್ವಂತ ಮಕ್ಕಳಾದರೇನು. ಪರರ ಮಕ್ಕಳಾದರೇನು. ಮಕ್ಕಳನ್ನು ದೇವರ ಸಮಾನವೆಂದು ಪರಿಗಣಿಸಲಾಗುತ್ತದೆ.

ಆದರೆ ಇಲ್ಲೊಬ್ಬ ಮಲತಾಯಿ ಮಾಡಿದ ಕೃತ್ಯ ಕೇಳಿದ್ರೆ ಕಠಿಣ ಹೃದಯಿಗಳ ಮನಸ್ಸೂ ಕರಗುತ್ತದೆ. ಕೇವಲ ನಾಲ್ಕು ವರ್ಷದ ಮಲಮಗನನ್ನು ಈ ಕ್ರೂರ ಮಹಿಳೆ ಕುದಿಯುವ ಬಿಸಿ ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದಾಳೆ. ಅಮೆರಿಕಾದಲ್ಲಿ ಈ ಕ್ರೂರ ಕೃತ್ಯ ನಡೆದಿದೆ.

ಒಹಿಯೋ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಅನ್ನಾ ರಿಟ್ಚಿ ಎಂಬ 25 ವರ್ಷದ ಯುವತಿ 4 ವರ್ಷದ ಅಸ್ಟಿನ್ ಕೂಪರ್ ನನ್ನು ಕುದಿಯುವ ನೀರಿನಲ್ಲಿ ಮುಳುಗಿಸಿದ್ದಾಳೆ. ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿದ್ದಾಳೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ವೇಳೆ ಸತ್ಯ ಸಂಗತಿ ಬಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಇದೀಗ ಕ್ರೂರ ಮಲತಾಯಿ ಜೈಲು ಪಾಲಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...