alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೆ ಸಜ್ಜಾಗಿದ್ದ ವಧುವಿನ ಮೇಲೆ ಆಸಿಡ್ ದಾಳಿ

acid

ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ವಧುವಿನ ಮೇಲೆ ಮಹಿಳೆಯೊಬ್ಬಳು ಆಸಿಡ್ ಎರಚಿದ್ದಾಳೆ. ಯುಗ್ವೀದಾ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ.

ರಾತ್ರಿ 11.30ರ ಸಮಯ, ಜೈಮಾಲೆ ಶಾಸ್ತ್ರಕ್ಕಾಗಿ ಸಿದ್ಧತೆ ನಡೆಯುತ್ತಿತ್ತು. ಮದುವೆಗೆ ಸಿದ್ಧಳಾಗಿದ್ದ ವಧು ತನ್ನ ಕೋಣೆಯಲ್ಲಿದ್ಲು. ಆಕೆಯನ್ನು ಭೇಟಿ ಮಾಡಲು ಬಂದ ಮಹಿಳೆಯೊಬ್ಬಳು ಆಸಿಡ್ ಎರಚಿ, ಹೊರಗಿನಿಂದ ಕೋಣೆಯ ಚಿಲಕ ಹಾಕಿ ಪರಾರಿಯಾಗಿದ್ದಾಳೆ.

ವಧುವಿನ ಅಳು, ಚೀರಾಟ ಕೇಳಿ ಧಾವಿಸಿದ ಸಂಬಂಧಿಕರು ಕೋಣೆಯ ಬಾಗಿಲು ತೆರೆದು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ರು. ಪ್ರಾಥಮಿಕ ಚಿಕಿತ್ಸೆ ಬಳಿಕ ವಧುವನ್ನು ವಾಪಸ್ ಕರೆತರಲಾಯ್ತು, ಬೆಳಗಿನ ಜಾವ 3 ಗಂಟೆಗೆ ವಿವಾಹ ಕೂಡ ನೆರವೇರಿದೆ.

ಆಸಿಡ್ ದಾಳಿಯಿಂದ ವಧುವಿನ ಮುಖ ಮತ್ತು ಕಣ್ಣಿಗೆ ಸುಟ್ಟ ಗಾಯಗಳಾಗಿದ್ದು, ಮದುವೆ ಶಾಸ್ತ್ರ ಮುಗಿಯುತ್ತಿದ್ದಂತೆ ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಧುವಿಗೆ ಪರಿಚಿತಳಾಗಿದ್ದ ಯಾರೋ ಮಹಿಳೆ ಈ ಕೃತ್ಯ ಎಸಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಸಿಸಿ ಟಿವಿ ದ್ಯಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಆಸಿಡ್ ದಾಳಿಗೊಳಗಾದ ವಧು ಸೇನಾಧಿಕಾರಿಯ ಪುತ್ರಿ, ವರ ಕೂಡ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...