alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಮೂಗು ಕಚ್ಚಿ ಅರೆಸ್ಟ್ ಆದ ಪತಿ…!

ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎನ್ನುವ ಆರೋಪದಲ್ಲಿ ಪತಿಯೊಬ್ಬ ಪತ್ನಿಯ ಮೂಗನ್ನು ಕಚ್ಚಿರುವಂತಾ ಘಟನೆ ಉತ್ತರ ಪ್ರದೇಶದ ಶಹಜಾನ್ಪುರ್ ನಲ್ಲಿ ನಡೆದಿದೆ. ಶಹಜಾನ್ಪುರದ ಪಲ್ಹೋರಾ ಎಂಬ ಗ್ರಾಮದ ಅರ್ಜುನ್ ಎಂಬ ವ್ಯಕ್ತಿ ತನ್ನ ಪತ್ನಿ ಗೀತಾಳನ್ನ ಮನೆಯಿಂದ ಹೊರಹೋಗದಂತೆ ತಡೆದು ಆಕೆಯ ಮೂಗನ್ನು ಕಚ್ಚಿದ್ದಾನೆ.

ಘಟನೆಯ ನಂತರದಲ್ಲಿ ಗೀತಾ ಕೂಡಲೇ ಜಿಲ್ಲಾಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿದ್ದಾಳೆ. ಪ್ರಕರಣದಲ್ಲಿ ಪತಿ ಅರ್ಜುನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐದು ದಿನಗಳ ಹಿಂದೆ ತನಗೆ ತಿಳಿಸದೆ ಪತ್ನಿ ಪರ ಊರಿಗೆ ತೆರಳಿದ್ದೇ ಜಗಳ ಹೆಚ್ಚಾಗಲು ಕಾರಣವಂತೆ.

ಆಕೆ ವಾಪಸ್ಸಾದ ನಂತರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಪತ್ನಿಯ ಶೀಲದ ಮೇಲೆ ಅನುಮಾನಗೊಂಡ ಅರ್ಜುನ್ ಆಕೆಗೆ ಅಕ್ರಮ ಸಂಬಂಧ ಇದೆ ಎಂದು ತಗಾದೆ ತೆಗೆದಿದ್ದಾನೆ. ಅದೇ ದಿನ ಈ ವಿಚಾರ ಪೊಲೀಸ್ ಠಾಣೆಯವರೆಗೂ ಬೆಳೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...