alex Certify
ಕನ್ನಡ ದುನಿಯಾ       Mobile App
       

Kannada Duniya

ಯುಪಿ ಮಹಿಳಾ ಅಧಿಕಾರಿ ಮೇಲೆ ಭೋಪಾಲ್ ನಲ್ಲಿ ನಡೀತು ಅತ್ಯಾಚಾರ

ಉತ್ತರ ಪ್ರದೇಶ ಸರ್ಕಾರಿ ಇಲಾಖೆಯ ವಾಣಿಜ್ಯ ವಿಭಾಗದಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಕೆಲಸ ಮಾಡ್ತಿರುವ ಅಧಿಕಾರಿ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದೆ. ನೋಯ್ಡಾದಲ್ಲಿ ಕೆಲಸ ಮಾಡ್ತಿರುವ ಪಂಕಜ್ ಕುಮಾರ್ ಸಿಂಗ್ (48) ಸಹೋದ್ಯೋಗಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನಂತೆ.

ಭೋಪಾಲದ ಹೊಟೇಲ್ ಒಂದರಲ್ಲಿ ಅತ್ಯಾಚಾರ ನಡೆದಿದೆ ಎಂದು ಪೀಡಿತೆ ದೂರು ನೀಡಿದ್ದಾಳೆ. ಭೋಪಾಲದ ಕಮಲಾನಗರ ಪೊಲೀಸ್ ಠಾಣೆಯಲ್ಲಿ ಪೀಡಿತೆ ದೂರು ನೀಡಿದ್ದಾಳಂತೆ. 2010 ರಿಂದಲೇ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸದ ಮೇಲೆ ಆಗಸ್ಟ್ 2 ರಂದು ಭೋಪಾಲ್ ಗೆ ಬಂದಿದ್ದ ಇವರು ಹೊಟೇಲ್ ನ ಬೇರೆ ಬೇರೆ ರೂಮಿನಲ್ಲಿ ತಂಗಿದ್ದರು. ಆಗಸ್ಟ್ 2 ರಂದು ಮಹಿಳೆ ರೂಮಿಗೆ ಬಂದ ಆರೋಪಿ ಬೆದರಿಸಿ ಅತ್ಯಾಚಾರವೆಸಗಿದ್ದಾನಂತೆ.

ಆಗಸ್ಟ್ 4 ರಂದು ಮಹಿಳೆ ದೆಹಲಿಗೆ ತೆರಳಬೇಕಿತ್ತಂತೆ. ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆರೋಪಿ ಮತ್ತೆ ಆಗಸ್ಟ್ ನಾಲ್ಕರಂದು ಅತ್ಯಾಚಾರವೆಸಗಿ ಹಲ್ಲೆ ನಡೆಸಿದ್ದನಂತೆ. ದೂರು ದಾಖಲಾಗ್ತಿದ್ದಂತೆ ಅಧಿಕಾರಿಯನ್ನು ಬಂಧಿಸಿರುವ ಭೋಪಾಲ್ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...