alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ವಿರೋಧಿಸಿದ್ದಕ್ಕೆ ಕಿವಿ ಕತ್ತರಿಸಿದ ಪಾಪಿಗಳು

ear-cut

ಉತ್ತರ ಪ್ರದೇಶದ ಬಾಘ್ಪತ್ ನಲ್ಲಿ ನಡೆದ ಅಮಾನವೀಯ ಘಟನೆ ಇದು. ಸಾಮೂಹಿಕ ಅತ್ಯಾಚಾರಕ್ಕೆ ಪ್ರತಿರೋಧ ಒಡ್ಡಿದ ಕಾರಣಕ್ಕೆ ನಾಲ್ವರು ಯುವಕರು ಹುಡುಗಿಯೊಬ್ಬಳ ಕಿವಿಯನ್ನೇ ಕತ್ತರಿಸಿದ್ದಾರೆ.

ಜನವರಿ 4 ರಂದು ಈ ಘಟನೆ ನಡೆದಿದೆ. ಹುಡುಗಿಯ ಮನೆಗೆ ನುಗ್ಗಿದ ನಾಲ್ವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಆಕೆ ತೀವ್ರ ಪ್ರತಿರೋಧ ಒಡ್ಡಿದ್ದರಿಂದ ಸಿಟ್ಟಿನಲ್ಲಿ ಅವಳ ಕಿವಿಯನ್ನೇ ಕತ್ತರಿಸಿದ್ದಾರೆ.

ಆದ್ರೆ ಬಾಘ್ಪತ್ ನ  ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಹುಡುಗಿಯ ಮೇಲೆ ರೇಪ್ ಯತ್ನ ನಡೆದೇ ಇಲ್ಲ, ಈ ಬಗ್ಗೆ ಎಸ್ಪಿ ಜೊತೆ ಖುದ್ದು ಮಾತನಾಡಿದ್ದೇನೆ. ಈ ಘಟನೆ ಡಿಸೆಂಬರ್ 31 ರ ಬೆಳಗ್ಗೆ ನಡೆದಿರೋದಾಗಿ ಅವರು ಮಾಹಿತಿ ನೀಡಿದ್ದಾರೆ.

ಇದು ಕೇವಲ ನೆರೆಹೊರೆಯವರ ಜಟಾಪಟಿಯಲ್ಲಿ ನಡೆದದ್ದು. ಘಟನೆ ನಡೆದು ಎಷ್ಟೋ ದಿನಗಳಾದ ಮೇಲೆ ದೂರು ಕೊಡುತ್ತಿದ್ದಾರೆ, ಆದ್ರೆ ಅದರಲ್ಲಿ ಸತ್ಯವಿಲ್ಲ ಅಂತಾ ಹೇಳಿದ್ದಾರೆ. ಆದ್ರೆ ನಿಜಾಂಶ ಏನು ಅನ್ನೋದು ಸೂಕ್ತ ತನಿಖೆಯಿಂದ ಮಾತ್ರ ಬಯಲಾಗಲು ಸಾಧ್ಯ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...