alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರನನ್ನು ಸಿಲುಕಿಸಲು ಮಗಳನ್ನೇ ಕೊಂದ ದಂಪತಿ

ಮೂರು ವರ್ಷದ ಮಗುವನ್ನು ಕೊಂದ ಆರೋಪದಲ್ಲಿ ಮಗುವಿನ ತಂದೆ, ತಾಯಿ ಹಾಗೂ ಸ್ನೇಹಿತನನ್ನು ಮುಜಾಫರ್ ನಗರ ಕೋರ್ಟ್ ದೋಷಿ ಎಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 28 ರಂದು ನೀಡುವ ಸಾಧ್ಯತೆ ಇದೆ.

ಪ್ರಕರಣದಲ್ಲಿ ತಂದೆ ಹಾಗೂ ತಾಯಿ ಮಗುವನ್ನು ಕೊಂದಿದ್ದಾರೆ. ಅಲ್ಲದೆ ಮಗು ಕಿಡ್ನಾಪ್ ಆಗಿದ್ದರ ಬಗ್ಗೆ ಅವರೇ ಪೊಲೀಸರಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ತಂದೆಯ ಸಹೋದರನ ಮೇಲೆ ಕಿಡ್ನಾಪ್ ಆರೋಪ ಹೊರಿಸಲಾಗಿದೆ.

ಮೇ 2 ರಂದು ಶಮೀಮ್ ಹಾಗೂ ಖುಷ್ ದಂಪತಿ, ಸ್ನೇಹಿತ ಜಾಹೀರ್ ಅಬ್ಬಾಸ್ ಜೊತೆಗೂಡಿ, ಮೂರು ವರ್ಷದ ಮಗುವನ್ನು ಕೊಂದಿದ್ದರು. ಅಲ್ಲದೆ ಶವವನ್ನು ದೂರದ ಸ್ಥಳಕ್ಕೆ ಸಾಗಿಸಿದ್ದರು. ಇಷ್ಟೆಲ್ಲಾ ಆದ ಮೇಲೆ ದಂಪತಿ ಹೊಸ ನಾಟಕ ಆಡಿದ್ದಾರೆ. ಅದ್ರಂತೆ ಶಮೀಮ್ ತನ್ನ ಸಹೋದರನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ದೂರು ನೀಡಿದ್ದಾನೆ. ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು, ಕೊನೆಗೆ ದಂಪತಿ ಹಾಗೂ ಸ್ನೇಹಿತ ಕೊಲೆ ಮಾಡಿದ್ದನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...