alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿಗೆ ಕಾಟ ಕೊಡ್ತಿದ್ದವನ ಕೈ ಕಟ್

cut

ಉತ್ತರಪ್ರದೇಶದ ಗೋರಕ್ಪುರದಲ್ಲಿರುವ ಸಿಂದುಲಿ ಬಿಂದುಲಿ ಗ್ರಾಮದಲ್ಲಿ ಯುವತಿಯೊಬ್ಬಳಿಗೆ ಕಾಟ ಕೊಡ್ತಾ ಇದ್ದ ವ್ಯಕ್ತಿಯೊಬ್ಬನ ಕೈಯನ್ನೇ ಆಕೆಯ ಸಹೋದರರು ಕತ್ತರಿಸಿ ಹಾಕಿದ್ದಾರೆ. ರಾಜ್ಮನ್ ಎಂಬಾತ ಯುವತಿಗೆ ಕಾಟ ಕೊಡ್ತಾ ಇದ್ದ, ಫೋನ್ ಮಾಡಿ ಬೆದರಿಸುತ್ತಿದ್ದ, ಒಮ್ಮೆ ಅವಳನ್ನು ಕಿಡ್ನಾಪ್ ಕೂಡ ಮಾಡಿದ್ದ.

ಇದೇ ಪ್ರಕರಣದಲ್ಲಿ ರಾಜ್ಮನ್ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆಯಾದ ಮೇಲೂ ತನ್ನ ಕೃತ್ಯವನ್ನ ನಿಲ್ಲಿಸಿರಲಿಲ್ಲ. ಅಷ್ಟರಲ್ಲಿ ಆ ಯುವತಿಗೆ ಮದುವೆಯೂ ಆಗಿತ್ತು. ಆದ್ರೂ ಅವಳನ್ನು ಹಿಂಬಾಲಿಸಿ ಪೀಡಿಸುತ್ತಿದ್ದ. ಇದ್ರಿಂದ ಆಕೆಯ ಸಹೋದರರಾದ ಉಮೇಶ್, ಕಮಲೇಶ್ ಹಾಗೂ ಮಿಥಿಲೇಶ್ ಕೆರಳಿದ್ದರು.

ನಿನ್ನೆ ರಾಜ್ಮನ್, ನದಿಯ ಬಳಿ ವಿರಮಿಸುತ್ತ ಕುಳಿತಿದ್ದ. ಇದೇ ಸಮಯಕ್ಕಾಗಿ ಕಾದಿದ್ದ ಮೂವರು ಸಹೋದರರು ಬೈಕ್ ಏರಿ ಬಂದಿದ್ದಾರೆ. ಕತ್ತಿಯಿಂದ ರಾಜ್ಮನ್ ಕೈಯನ್ನು ಕತ್ತರಿಸಿ ಹಾಕಿದ್ದಾರೆ. ಅಷ್ಟೇ ಅಲ್ಲ ತುಂಡಾದ ಕೈಯನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಎಫ್ ಐ ಆರ್ ದಾಖಲಿಸಿಕೊಂಡಿರೋ ಪೊಲೀಸರು ತಲೆಮರೆಸಿಕೊಂಡಿರುವ ಉಮೇಶ್, ಕಮಲೇಶ್ ಹಾಗೂ ಮಿಥಿಲೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...