alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿ ಒಪ್ಪದ ಯುವತಿಗೆ ಇಂಥ ಶಿಕ್ಷೆ

1side_luv_murder_1501692013_618x347

ರಾಜಸ್ಥಾನದ ಬನ್ಸ್ವಾರಾದಲ್ಲಿ ಹುಚ್ಚು ಪ್ರೀತಿಗೆ ಬಿದ್ದ ಯುವಕನೊಬ್ಬ ಯುವತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಹುಡುಗಿ ಮನೆಗೆ ನುಗ್ಗಿದ ಪಾಗಲ್ ಪ್ರೇಮಿ ಆಕೆಯ ಕತ್ತು ಕತ್ತರಿಸಿದ್ದಾನೆ. ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬನ್ಸ್ವಾರ್ ನಲ್ಲಿ ವಾಸವಾಗಿರುವ 19 ವರ್ಷದ ಹುಡುಗಿ ವೈಶಾಲಿ ದ್ವಿತೀಯ ಪಿಯುಸಿ ಮುಗಿಸಿದ್ದು ಮುಂದಿನ ಓದಿಗಾಗಿ ತಯಾರಿ ನಡೆಸುತ್ತಿದ್ದಳು. ಬುಧವಾರ ಮಧ್ಯಾಹ್ನ ಮನೆಯ  ಅಂಗಳದಲ್ಲಿ ಬಟ್ಟೆ ಒಣಗಿಸುತ್ತಿದ್ದ ವೇಳೆ ಶಸ್ತ್ರಾಸ್ತ್ರ ಹಿಡಿದು ಮನೆಗೆ ನುಗ್ಗಿದ್ದಾನೆ 22 ವರ್ಷದ ಜಗದೀಶ್. ಎರಡನೇ ಮಹಡಿ ಮೇಲಿದ್ದ ಕೆಲಸದಾಕೆ ಈತನನ್ನು ನೋಡಿ ಕೂಗಿಕೊಂಡಿದ್ದಾಳೆ.

ಅಷ್ಟರಲ್ಲೆ ವೈಶಾಲಿ ಕತ್ತು ಕತ್ತರಿಸಿ ಓಡಿ ಹೋಗಿದ್ದಾನೆ ಜಗದೀಶ್. ಜಗದೀಶ್ ಮಾನಸಿಕವಾಗಿ ಅಸ್ವಸ್ಥನಾಗಿದ್ದು ವೈಶಾಲಿಯನ್ನು ಪ್ರೀತಿಸುತ್ತಿದ್ದನಂತೆ. ಹಿಂದಿನ ವಾರ ಮನೆಗೆ ಬಂದು ಧಮಕಿ ಹಾಕಿ ಹೋಗಿದ್ದನಂತೆ. ಆದ್ರೆ ವೈಶಾಲಿ ಸೇರಿದಂತೆ ಆತನ ಮನೆಯವರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ವೈಶಾಲಿ ಪ್ರೀತಿ ನಿರಾಕರಿಸಿದ್ದರಿಂದ ಕೋಪಗೊಂಡ ಜಗದೀಶ್ ಈ ಕೃತ್ಯವೆಸಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...