alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಕು ತೋರಿಸಿ ಒಳ ಉಡುಪು ದೋಚಿದ ಖದೀಮರು

underwear_shop_2017518_93653_18_05_2017

ಛತ್ತೀಸ್ಗಡದ ರಾಯ್ಪುರದಲ್ಲಿ ದುಷ್ಕರ್ಮಿಗಳಿಬ್ಬರು ಒಳ ಉಡುಪು ದೋಚಿದ್ದಾರೆ. ಬಟ್ಟೆ ಅಂಗಡಿಯೊಂದಕ್ಕೆ ಬಂದ ಇಬ್ಬರು ಒಳ ಉಡುಪು ತೋರಿಸುವಂತೆ ಹೇಳಿದ್ದಾರೆ. ಹಾಗೆ ಬೇರೆ ದುಬಾರಿ ಬೆಲೆಯ ಬಟ್ಟೆಯನ್ನು ತೋರಿಸುವಂತೆ ತಿಳಿಸಿದ್ದಾರೆ. ಒಳಗಿದ್ದ ಬಟ್ಟೆಗಳನ್ನು ಅಂಗಡಿ ಮಾಲೀಕ ಹೊರಗೆ ತೆಗೆಯುತ್ತಿದ್ದಂತೆ ಚಾಕು ತೋರಿಸಿ ಎಲ್ಲ ಬಟ್ಟೆ ದೋಚಿ ಪರಾರಿಯಾಗಿದ್ದಾರೆ.

ಸಂತೋಷಿ ನಗರದಲ್ಲಿ ಸೌರಭ್ ಎಂಬಾತನ ಬಟ್ಟೆ ಅಂಗಡಿಯಿದೆ. ಆರೋಪಿ ಶೇಖ್ ಖಾನ್ ಹಾಗೂ ದಿನೇಶ್ ನಾಗಾ ಎಂಬಿಬ್ಬರು ಅಂಗಡಿಗೆ ಬಂದಿದ್ದಾರೆ. ಮೊದಲು ಒಳ ಉಡುಪು ತೋರಿಸುವಂತೆ ಹೇಳಿದ್ದಾರೆ. ನಂತ್ರ ಜೀನ್ಸ್ ಕೇಳಿದ್ದಾರೆ. ಅಂಗಡಿ ಮಾಲೀಕ ಅಂಡರ್ವೇರ್ ಹಾಗೂ ದುಬಾರಿ ಬೆಲೆಯ ಜೀನ್ಸ್ ಕೌಂಟರ್ ನಲ್ಲಿಟ್ಟಿದ್ದಾನೆ. ಆತ ಕೌಂಟರ್ ನಲ್ಲಿಡುತ್ತಿದ್ದಂತೆ ಆತನಿಗೆ ಚಾಕು ತೋರಿಸಿ ಇಬ್ಬರು ಬಟ್ಟೆ ದೋಚಿ ಪರಾರಿಯಾಗಿದ್ದಾರೆ.

ತಕ್ಷಣ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾನೆ. ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...