alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರನ್ನು ನೋಡಿ ನಿಗದಿಯಾಗ್ತಿತ್ತು ಮಹಿಳೆಯರ ಬೆಲೆ

ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಸ್ಪಾ ಹೆಸರಿನಲ್ಲಿ ದೇಹ ವ್ಯಾಪಾರ ದಂಧೆ ನಡೆಸ್ತಿದ್ದ ಇಬ್ಬರನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಇಲ್ಲಿ ಸಿಕ್ಕಿಬಿದ್ದ ಮಹಿಳೆಯರ ಕಥೆ ಕೇಳಿ ಪೊಲೀಸರು ದಂಗಾಗಿದ್ದಾರೆ.

ಡೆಹ್ರಾಡೂನ್ ಹೊಟೇಲ್ ಒಂದರಲ್ಲಿ ದೇಹ ವ್ಯಾಪಾರ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಸ್ಪಾ ಹೆಸರಿನಲ್ಲಿ ಈ ಅವ್ಯವಹಾರ ನಡೆಸಲಾಗ್ತಿದ್ದು ಅಲ್ಲಿ ವಿದೇಶಿ ಮಹಿಳೆಯರಿದ್ದಾರೆಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ನಾಗಾಲ್ಯಾಂಡ್ ನ ಒಬ್ಬ ಮಹಿಳೆ, ಮೇಘಾಲಯದ ಇಬ್ಬರು ಮಹಿಳೆಯರು ಸೇರಿದಂತೆ ಹೊಟೇಲ್ ಮಾಲೀಕ ಹಾಗೂ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗಾಲ್ಯಾಂಡ್ ಮಹಿಳೆ ಕೆಲಸಕ್ಕೆಂದು ಹೊಟೇಲ್ ಗೆ ಬಂದಿದ್ದಳಂತೆ. ಆದ್ರೆ ಕೆಲಸದ ಹೆಸರಿನಲ್ಲಿ ಹೊಟೇಲ್ ಮಾಲೀಕ ದೇಹ ವ್ಯಾಪಾರಕ್ಕೆ ತಳ್ಳಿದ್ದನಂತೆ.

ಆರೋಪಿಗಳನ್ನು ಪೊಲೀಸರು ನ್ಯಾಯಾಲಯದ ಮುಂದೆ ನಿಲ್ಲಿಸಿ ಜೈಲಿಗಟ್ಟಿದ್ದಾರೆ. ನಾಗಾಲ್ಯಾಂಡ್ ಮಹಿಳೆಯನ್ನು ಊರಿಗೆ ವಾಪಸ್ ಹೋಗುವಂತೆ ಸೂಚನೆ ನೀಡಲಾಗಿದೆ. ಉಳಿದ ಇಬ್ಬರು ಮಹಿಳೆಯರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...