alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿ ಹತ್ಯೆ ಪ್ರಕರಣದಲ್ಲಿ ಮಾಡೆಲ್ ಅರೆಸ್ಟ್

ದೆಹಲಿಯ ವಬಾನಾ ಪ್ರದೇಶದಲ್ಲಿ ನಡೆದ ಶಿಕ್ಷಕಿಯೊಬ್ಬಳ ಹತ್ಯೆ ಪ್ರಕರಣ ಬಯಲು ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಹಿಂದೆ ಮುಂಬೈ ನಂಟಿದೆ. ಶಿಕ್ಷಕಿ ಪತಿ, ಮಾಡೆಲ್ ಏಂಜೆಲ್ ಗುಪ್ತಾ ಪ್ರೀತಿಗೆ ಬಿದ್ದಿದ್ದ ಎನ್ನಲಾಗಿದೆ. ಮಾಡೆಲ್ ಮದುವೆಯಾಗುವ ಹುಚ್ಚಿಗೆ ಪತ್ನಿಯನ್ನು ಹತ್ಯೆ ಮಾಡಿದ್ದಾನೆ.

ಶಿಕ್ಷಕಿ ಸುನಿತಾ  ಡೈರಿಯಲ್ಲಿ ಏಂಜಲ್ ಗುಪ್ತಾ ಬಗ್ಗೆ ಮಾಹಿತಿಯಿತ್ತು. ಏಂಜಲ್ ಗುಪ್ತಾಳನ್ನು ವಶಕ್ಕೆ ಪಡೆದ ಪೊಲೀಸರು ಕಾಲ್ ಹಿಸ್ಟ್ರಿ ನೋಡಿದ್ದಾರೆ. ಆಗ ಸುನಿತಾ ಪತಿ ಹಾಗೂ ಏಂಜಲ್ ಸಂಬಂಧ ಬಯಲಾಗಿದೆ. 26 ವರ್ಷದ ಮಾಡೆಲ್ ಏಂಜಲ್ ಉತ್ತರ ಪ್ರದೇಶ ಮೂಲದವಳು. ಆಕೆ ಮೂಲ ಹೆಸರು ಶಶಿಪ್ರಭು.

ಏಂಜಲ್ ತಾಯಿ ದೆಹಲಿಯಲ್ಲಿ ವಾಸವಾಗಿದ್ದು, ಎರಡನೇ ಮದುವೆಯಾಗಿದ್ದಾರೆ. ಎರಡನೇ ತಂದೆ ರಾಜೀವ್ ವ್ಯಾಪಾರಿಯಾಗಿದ್ದು, ಏಂಜಲ್ ವಾಸವಾಗಿರುವ ಫ್ಲಾಟ್ ಬಾಡಿಗೆಯನ್ನೂ ರಾಜೀವ್ ನೀಡುತ್ತಿದ್ದಾನೆ. ಆರೋಪಿ ಮಂಜೀತ್ ಹಾಗೂ ಏಂಜಲ್ ಭೇಟಿ ಗುರ್ಗಾಂವ್ ನಲ್ಲಿ ಆಗಿತ್ತು. ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಇದು ತಿಳಿದ ರಾಜೀವ್ ಮಂಜೀತ್ ಗೆ ಸಹಾಯ ಮಾಡಿದ್ದ. ಪತ್ನಿ ಹತ್ಯೆಗೆ ಮಂಜೀತ್ ಆಯುಧ ಖರೀದಿ ಮಾಡಿದ್ದನಂತೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...