alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಕದ್ದರು….ಅಷ್ಟೇ ಬೇಗ ಸಿಕ್ಕಿಬಿದ್ದರು…..

ಕಾರು ಕದ್ದ ಇಬ್ಬರು ಆರೋಪಿಗಳನ್ನ ಪೊಲೀಸರು ನೀರು ಕುಡಿದಷ್ಟೇ ಸುಲಭವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಲ್ವಿಂದರ್ ಸಿಂಗ್ ಮತ್ತು ಲವ್ ರಾಘವ್ ಎಂಬ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ಅಕ್ಕಪಕ್ಕದ ಮನೆಯವರಾಗಿದ್ದ ಆರೋಪಿತರು ದಿಢೀರನೆ ಹಣ ಗಳಿಸುವ ಉದ್ದೇಶದಿಂದ ಕಾರು ಕಳ್ಳತನ ಮಾಡಿದ್ದಾಗಿ, ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ. ರಾಜ್ಧೂತ್ ಹೊಟೇಲ್ ಮುಂದೆ ಜುಲೈ 5 ರಂದು ಬಿಸ್ವಾಲ್ ಎಂಬ ವ್ಯಕ್ತಿಯ ಹೋಂಡಾ ಸಿಟಿ ಕಾರು ಕಳ್ಳತನವಾಗಿತ್ತು. ಈ ಸಂಬಂಧ ಬಿಸ್ವಾಲ್ ಜುಲೈ 6 ರಂದು ಪೊಲಿಸ್ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದರು.

ಕಳ್ಳತನವಾಗಿದ್ದ ಕಾರಿನಲ್ಲಿ ಜಿಪಿಎಸ್ ಅಳವಡಿಸಿದ್ದರಿಂದ ಪೊಲೀಸರು ಪ್ರಕರಣವನ್ನ ಬೇಧಿಸೋದು ಕಷ್ಟವೇನು ಆಗಲಿಲ್ಲ. 20 ಗಂಟೆಗಳ ಕಾಲ ಕಾರಿನ ಜಿಪಿಎಸ್ ಟ್ರ್ಯಾಕ್ ಮಾಡಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಾರು ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...