alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಆರೋಪದಲ್ಲಿ ನಿರ್ಮಾಪಕ ಅಂದರ್

ಮುಂಬೈ: ಟಿವಿ ಧಾರಾವಾಹಿ ನಿರ್ಮಾಪಕನನ್ನು ಅತ್ಯಾಚಾರ ಆರೋಪದಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಿ ಮುಂಬೈ ಕೋರ್ಟ್‌ ತೀರ್ಪು ನೀಡಿದೆ.

ಮುಖೇಶ್‌ ಮಿಶ್ರಾ(33), 31 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ 376 ಹಾಗೂ 506(2) ಪ್ರಕಾರ 7 ವರ್ಷ ಸೆರೆವಾಸ ಶಿಕ್ಷೆ ವಿಧಿಸಿ, ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ ಎಂದು ಸರಕಾರಿ ಅಭಿಯೋಜಕರಾದ ಅಶ್ವಿನಿ ರಾಯ್ಕರ್ ತಿಳಿಸಿದ್ದಾರೆ.

ಕೋರ್ಟ್‌ 9 ಮಂದಿಯ ಸಾಕ್ಷಿಯನ್ನು ಪರಿಗಣಿಸಿತ್ತು. ಪೊವಾಯಿ ಸ್ಟುಡಿಯೋದಲ್ಲಿ ಮಹಿಳೆ ಧಾರಾವಾಹಿ ನಿರ್ಮಾಣ ಯುನಿಟ್‌ ನಲ್ಲಿ ಕೆಲಸ ಮಾಡುತ್ತಿದ್ದಳು. 2012 ರ ಡಿ.12 ರಂದು ಸ್ಟುಡಿಯೋಗೆ ಕರೆಸಿಕೊಂಡ ಮಿಶ್ರಾ, ಅಲ್ಲಿನ ಕೊಠಡಿಯಲ್ಲಿ ಅತ್ಯಾಚಾರ ಮಾಡಿದ್ದಾಗಿ ದೂರು ನೀಡಿದ್ದಳು. ಅಲ್ಲದೆ ಘಟನೆ ಕುರಿತು ಯಾರಿಗಾದರೂ ಮಾಹಿತಿ ನೀಡಿದಲ್ಲಿ ಮಹಿಳೆಯ ಪುತ್ರಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...