alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರೈಂ ಸ್ಟೋರಿ ನೋಡಿ ಸ್ನೇಹಿತನನ್ನೇ ಕೊಲೆ ಮಾಡಿದ ಯುವಕರು…!

ಇತ್ತೀಚೆಗೆ ಪ್ರಸಾರವಾಗ್ತಿರೋ ಕೆಲ ಟಿವಿ ಶೋಗಳು, ಯುವಕರನ್ನ, ಮಕ್ಕಳನ್ನ ಹಾದಿ ತಪ್ಪಿಸುತ್ತಿವೆ. ಟಿವಿ ಚಾನಲ್ ಗಳಲ್ಲಿ ಬರುವ ಕ್ರೈಂ ಸ್ಟೋರಿಗಳಿಂದ ಪ್ರೇರೇಪಿತರಾಗಿ, ಮೂವರು ವಿದ್ಯಾರ್ಥಿಗಳು ತಮ್ಮ ಸ್ನೇಹಿತನನ್ನೇ ಕೊಂದು ಹಾಕಿರುವ ಘಟನೆ ಮಧ್ಯಪ್ರದೇಶದ ಕೋಟಾದಲ್ಲಿ ನಡೆದಿದೆ.

ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದ ಯುವಕನನ್ನು ಆತನ ಮೂವರು ಸ್ನೇಹಿತರೇ ಕೊಂದು ಹಾಕಿದ್ದಾರೆ. ನಂತರ ಯುವಕನ ತಂದೆಗೆ ಕರೆ ಮಾಡಿ ನಿಮ್ಮ ಮಗ ನಿಮಗೆ ಬೇಕು ಅಂದ್ರೆ 15 ಲಕ್ಷ ರೂಪಾಯಿ ನೀಡುವಂತೆ ಈ ಆರೋಪಿಗಳ ಬೇಡಿಕೆ ಇಟ್ಟಿದ್ರು.

ಮೇ 2 ರಂದು ಮೂವರು ಆರೋಪಿಗಳು, ರಾಮರಾಮಪುರದ ಗದ್ದೆಯಲ್ಲಿ ತಮ್ಮ ಸ್ನೇಹಿತನೇ ಆದ ಮೇವಾರ್ ನನ್ನು ಕುಡಿಯಲು ಅಹ್ವಾನಿಸಿದ್ದಾರೆ. ಸ್ನೇಹಿತರು ಕರೆದರೆಂದು ಮೇವಾರ್ ಅಲ್ಲಿಗೆ ತೆರಳಿದ್ದಾನೆ. ಆಗ ಈ ಆರೋಪಿಗಳು ಅವನನ್ನ ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿ, ದೇಹವನ್ನು ವಿರೂಪಗೊಳಿಸಿದ್ರು.

ಇಷ್ಟಕ್ಕೆ ಸುಮ್ಮನಾಗದ ಈ ಪಾಪಿಗಳು, ಯುವಕನ ದೇಹ ಡಿಕಂಪೋಸ್ ಆಗಲು, ದೇಹವನ್ನು ಡ್ರಮ್ ನೊಳಗೆ ಹಾಕಿ ಅದಕ್ಕೆ ಉಪ್ಪು ಸುರಿದರು. ನಂತರ ಚೀಲದಲ್ಲಿ ಪ್ಯಾಕ್ ಮಾಡಿ ನಗರದಿಂದ 20 ಕಿ.ಮೀ. ದೂರದಲ್ಲಿರುವ ಚಂಬಲ್ ನದಿಯ ಕಂದರದಲ್ಲಿ ದೇಹವನ್ನು ಹಾಕಿ ಬಂದಿದ್ರು. ಬಳಿಕ ಮೇವಾರ ತಂದೆ ಬನ್ವರಿಲಾಲ್ ಮೇವಾರಾಗೆ ಕರೆ ಮಾಡಿ, ನಿಮ್ಮ ಮಗ ಬೇಕು ಅಂದ್ರೆ 15 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ರು ಎಂದು ಕೋಟಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸದ್ಯ ಪೊಲೀಸರು ವಿಕ್ರಾಂತ್ ಸಿಂಗ್ ಅಲಿಯಾಸ್ ಹಿಮಾಂಶು (18) , ವಿಜಯೇಂದ್ರ ಸಿಂಗ್ ಭಾಟಿ ( 20) , ಪ್ರದೀಪ್ ಕುಶ್ವವಾ ಅಲಿಯಾಸ್ ಬಿನ್ನಿ ( 18) ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಈ ಆರೋಪಿಗಳ ವಿಚಾರಣೆ ನಡೆಸಿದಾಗ, ಅದ್ಧೂರಿ ಜೀವನ ನಡೆಸಲು ಹಣ ಬೇಕಿತ್ತು. ಹೀಗಾಗಿ ಈ ಕೊಲೆ ಮಾಡಿದ್ದಾಗಿ ತಿಳಿಸಿದ್ದಾರೆ. ಇನ್ನು ಮೃತದೇಹವನ್ನು ಡಿಕಂಪೋಸ್ ಮಾಡುವ ಐಡಿಯಾವನ್ನ ಟಿವಿ ಚಾನಲ್ ಗಳಲ್ಲಿ ಬರುವ ಕ್ರೈಂ ಶೋನಿಂದ ತಿಳಿದುಕೊಂಡಿದ್ದೆವು ಅಂತಾ ಪೊಲೀಸ್ರಿಗೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...