alex Certify
ಕನ್ನಡ ದುನಿಯಾ       Mobile App
       

Kannada Duniya

ಸತತ 9 ತಿಂಗಳ ಕಾಲ ಶಿಕ್ಷಕಿ ಮಾಡಿದ್ಲು ಇಂಥ ಕೆಲಸ..!

ಆಗ್ರಾದಲ್ಲಿ ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಶಿಕ್ಷಕಿಯೊಬ್ಬಳು ತನ್ನ ಶಿಷ್ಯನಿಗೆ ಲೈಂಗಿಕ ಕಿರುಕುಳ ನೀಡಿದ್ದಾಳೆ. ಅಷ್ಟೇ ಅಲ್ಲ ಆತನಿಂದ ಕಳ್ಳತನ ಮಾಡಿಸಿದ್ದಾಳೆ.

ಆಗ್ರಾದ ಹರಿಪವಂತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ. ಕೋಚಿಂಗ್ ಸೆಂಟರ್ ನಡೆಸ್ತಿದ್ದ ಶಿಕ್ಷಕಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಅದನ್ನು ವಿಡಿಯೋ ಮಾಡಿ ಬೆದರಿಸಿದ್ದಾಳೆ. ಮನೆಯಿಂದ ಹಣ ತರುವಂತೆ ಒತ್ತಡ ಹೇರಿದ್ದಾಳೆ. ಶಿಕ್ಷಕಿ ಜೊತೆ ಆಕೆ ಸಹೋದರಿ ಹಾಗೂ ಅಣ್ಣ ಕೂಡ ಕೈ ಜೋಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ 25 ವರ್ಷದ ಶಿಕ್ಷಕಿ ಪತಿ ಸಾವನ್ನಪ್ಪಿದ್ದಾನೆ. ಸಹೋದರಿಗೆ 23 ವರ್ಷ. ಅಣ್ಣನಿಗೆ 30 ವರ್ಷ. ಪೀಡಿತ ವಿದ್ಯಾರ್ಥಿ ತಂದೆ ದೊಡ್ಡ ವ್ಯಾಪಾರಿಯಾಗಿದ್ದು, ಆತನನ್ನು ದೋಚಲು ವಿದ್ಯಾರ್ಥಿಯನ್ನು ಪೀಡಿಸಿದ್ದಾರೆ ಈ ಖದೀಮರು. ಟ್ಯೂಷನ್ ಗೆ ಬಂದ ವಿದ್ಯಾರ್ಥಿಗೆ ಮೊದಲು ನಶೆಯ ಪದಾರ್ಥ ನೀಡಿದ್ದಾರೆ. ನಂತ್ರ ಪೋರ್ನ್ ಚಿತ್ರ ತೋರಿಸಿದ್ದಾರೆ. ಆಮೇಲೆ ಸಂಬಂಧ ಬೆಳೆಸಿ ಅದ್ರ ವಿಡಿಯೋ ಮಾಡಿದ್ದಾರೆ.

ಮನೆಯಲ್ಲಿ ಈ ವಿಷ್ಯ ತಿಳಿಸಿದ್ರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದಾಗಿ ಹೆದರಿಸಿ ಮನೆಯಿಂದ ಹಣವನ್ನು ಕದ್ದು ತರುವಂತೆ ಹೇಳಿದ್ದಾರೆ. ಸತತ 9 ತಿಂಗಳುಗಳ ಕಾಲ ಹಿಂಸೆ ನೀಡಿದ್ದಾರೆ. ಹೆದರಿದ ವಿದ್ಯಾರ್ಥಿ ಮನೆಯಲ್ಲಿ ಕಳ್ಳತನ ಶುರುಮಾಡಿದ್ದಾನೆ. ದಿನಕ್ಕೊಂದು ಆಭರಣ ಕಳುವಾಗ್ತಿರುವುದನ್ನು ನೋಡಿದ ಪಾಲಕರು ಸಿಸಿ ಟಿವಿ ವೀಕ್ಷಿಸಿದ್ದಾರೆ. ಆಗ ಕಳ್ಳತನ ಮಾಡಿದ್ದು ಮಗ ಎಂಬ ವಿಷ್ಯ ಗೊತ್ತಾಗಿದೆ. ಮಗನಿಂದ ಸತ್ಯ ತಿಳಿದ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...