alex Certify
ಕನ್ನಡ ದುನಿಯಾ       Mobile App
       

Kannada Duniya

ಬಲೂನ್ ಹಿಡಿಯಲು ಹೋಗಿ ಸಾವನ್ನಪ್ಪಿದ ಪುಟ್ಟ ಬಾಲಕ

3 ವರ್ಷದ ಬಾಲಕನೊಬ್ಬ ಬಲೂನ್ ಹಿಡಿಯಲು ಹೋದ ವೇಳೆ ಶಾಲಾ ಬಸ್ ನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಶನಿವಾರ ಬೆಳಿಗ್ಗೆ ಗುರ್ಗಾಂವ್ ನಿಂದ 22 ಕಿ.ಮೀ. ದೂರದಲ್ಲಿರುವ ಫರುಕ್ ನಗರ್ ದ ಮುಶಿದ್ಪುರ ಗ್ರಾಮದಲ್ಲಿ ಈ ದುರಂತ ಘಟನೆ ನಡೆದಿದೆ.

ಸೀಮಾ ಯಾದವ್ ಎಂಬಾಕೆ ತನ್ನ 3 ವರ್ಷದ ಮಗು ರಕ್ಷಿತ್ ನನ್ನು ಕರೆದುಕೊಂಡು ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದ ಮಗಳನ್ನು ಬಿಡಲು ತೆರಳಿದ್ದರು. ಈ ಸಂದರ್ಭದಲ್ಲಿ ಶಾಲಾ ಬಸ್ ನಲ್ಲಿದ್ದ ವಿದ್ಯಾರ್ಥಿಯೊಬ್ಬನ ಕೈಯಿಂದ ಬಲೂನ್ ಹಾರಿ ಬಂದಿದ್ದು, ಇದು ಮಗು ರಕ್ಷಿತ್ ನನ್ನು ಆಕರ್ಷಿಸಿದೆ.

ತಾಯಿ ಗಮನ ಬೇರೆಡೆ ಇದ್ದಾಗ ರಕ್ಷಿತ್ ಬಲೂನ್ ಹಿಡಿಯಲು ಧಾವಿಸಿದ್ದಾನೆ. ಆದರೆ ಇದನ್ನು ಗಮನಿಸದ ಚಾಲಕ ಬಸ್ ಚಾಲನೆ ಮಾಡಿದ್ದು, ಚಕ್ರಕ್ಕೆ ಸಿಲುಕಿದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...