alex Certify
ಕನ್ನಡ ದುನಿಯಾ       Mobile App
       

Kannada Duniya

ನಾಚಿಕೆಗೇಡಿ ಕೆಲಸ ಮಾಡಿದ ಟಿಆರ್ಎಸ್ ನಾಯಕ : ವಿಡಿಯೋ ವೈರಲ್

ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ಎಸ್ ನಾಯಕನೊಬ್ಬನ ನಾಚಿಕೆಗೇಡಿ ವಿಡಿಯೋವೊಂದು ವೈರಲ್ ಆಗಿದೆ. ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ ಮೊದಲ ಪತ್ನಿಗೆ ಈ ನಾಯಕ ಥಳಿಸಿದ್ದಾನೆ.

ತೆಲಂಗಾಣದ ಟಿಆರ್ಎಸ್ ನಾಯಕ ಪಿ. ಶ್ರೀನಿವಾಸ್ ರೆಡ್ಡಿ ಮೊದಲ ಪತ್ನಿ ಮೇಲೆ ಕೈ ಎತ್ತಿದ್ದಾನೆ. ಮೊದಲ ಪತ್ನಿ ಸಂಗೀತಾ ಶ್ರೀನಿವಾಸ್ ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮನೆ ಮುಂದೆ ಇದೇ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಈ ವೇಳೆ ಶ್ರೀನಿವಾಸ್ ರೆಡ್ಡಿ ಪತ್ನಿ ಸಂಗಿತಾಗೆ ಮನಸ್ಸಿಗೆ ಬಂದಂತೆ ಥಳಿಸಿದ್ದಾನೆ.

ನಾಲ್ಕು ವರ್ಷಗಳ ಹಿಂದೆ ಶ್ರೀನಿವಾಸ್ ರೆಡ್ಡಿ ಸಂಗೀತಾಳನ್ನು ಮದುವೆಯಾಗಿದ್ದ. ಸಂಗೀತಾಗೆ ಒಂದು ಹೆಣ್ಣು ಮಗುವಿದೆ. ಹೆರಿಗೆ ನಂತ್ರ ಶ್ರೀನಿವಾಸ್ ಹಾಗೂ ಆತನ ಮನೆಯವರು ಸಂಗೀತಾಗೆ ಹಿಂಸೆ ನೀಡಲು ಶುರುಮಾಡಿದ್ದಾರೆ ಎನ್ನಲಾಗಿದೆ. ಸಂಗೀತಾಗೆ ವಿಚ್ಛೇದನ ನೀಡದೆ ಶ್ರೀನಿವಾಸ್ ರೆಡ್ಡಿ ಜಗದೀಶ್ವರಿ ಎಂಬಾಕೆಯನ್ನು ಮದುವೆಯಾಗಿದ್ದಾನೆ. ವಿಷ್ಯ ತಿಳಿದ ಸಂಗೀತಾ ವಿರೋಧ ವ್ಯಕ್ತಪಡಿಸಿದ್ದಾಳೆ. ಶ್ರೀನಿವಾಸ್ ಮನೆಗೆ ಬಂದಿದ್ದಾಳೆ.

ಇದ್ರಿಂದ ಕೋಪಗೊಂಡ ಶ್ರೀನಿವಾಸ್ ಪತ್ನಿಗೆ ಹೊಡೆದಿದ್ದಲ್ಲದೆ ಕೂದಲು ಹಿಡಿದು ಎಳೆದಿದ್ದಾನೆ. ಇದನ್ನು ಸಂಗೀತಾ ಕುಟುಂಬಸ್ಥರು ವಿಡಿಯೋ ಮಾಡಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...