alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ರಮ ಸಂಬಂಧಕ್ಕೆ ಪ್ರಾಣತೆತ್ತ NRI

Dead body in a mortuary

ಕಳೆದ ವಾರ ಹೈದ್ರಾಬಾದ್ ನ ಫಲಕ್ನುಮಾದಿಂದ ನಾಪತ್ತೆಯಾಗಿದ್ದ ಎನ್ ಆರ್ ಐ ಶವ ಪತ್ತೆಯಾಗಿದೆ. ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಮೃತದೇಹವನ್ನು ಹಂತಕರು ಹೂತಿಟ್ಟಿದ್ದರು. 35 ವರ್ಷದ ಸೈಯದ್ ಇಮ್ರಾನ್ ಎಂಬಾತ ಅಬುಧಾಬಿ ನ್ಯಾಶನಲ್ ಬ್ಯಾಂಕ್ ನಲ್ಲಿ ಕಸ್ಟಮರ್ ಸರ್ವೀಸ್ ಅಧಿಕಾರಿಯಾಗಿ ಕೆಲಸ ಮಾಡ್ತಾ ಇದ್ದ.

ಸೈಯದ್, ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಎನ್ನಲಾಗ್ತಿದ್ದು, ಅದೇ ಕಾರಣಕ್ಕೆ ಹತ್ಯೆ ನಡೆದಿದೆ ಅಂತಾ ಪೊಲೀಸರು ಶಂಕಿಸಿದ್ದಾರೆ. ಮಗ ಕಾಣೆಯಾಗಿದ್ದಾನೆ ಅಂತಾ ಸೈಯದ್ ತಾಯಿ ಫೆಬ್ರವರಿ 4ರಂದು ಫಲಕ್ನುಮಾ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಆ ದಿನ ರೈತು ಬಜಾರ್ ನಲ್ಲಿ ಮಹಿಳೆಯೊಬ್ಬಳನ್ನು ಭೇಟಿಯಾಗಿದ್ದ ಸೈಯದ್, ಅವಳೊಂದಿಗೆ ಸ್ಕೂಟರ್ ನಲ್ಲಿ ತೆರಳಿದ್ದ.

ಸೈಫ್ ಬಿನ್ ಸಾಬೇತ್ ಬರಬೂದ್ ಎಂಬಾತನನ್ನು ಹಿಡಿದ ಪೊಲೀಸರು ಹತ್ಯೆ ರಹಸ್ಯ ಬಯಲು ಮಾಡಿದ್ದಾರೆ. ಸೈಫ್ ಬಿನ್ ಸಹೋದರನ ಪತ್ನಿ ಹಾಗೂ ಅಕ್ಕನ ಜೊತೆ ಸೈಯದ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಕತಾರ್ ಸೇನೆಯಲ್ಲಿ ಸರ್ವೆಂಟ್ ಆಗಿರೋ ಸಯೀದ್ ಬಿನ್ ತವರಿಗೆ ಬಂದಾಗ ಹೆಂಡತಿ ಮತ್ತು ಸಹೋದರಿ ಜೊತೆ ಸೈಯದ್ ಸಂಬಂಧದ ವಿಷಯ ಗೊತ್ತಾಗಿದೆ.

ಸೈಫ್ ಹಾಗೂ ಸಯೀದ್ ಬಿನ್ ಆತನ ಹತ್ಯೆಗೆ ಪ್ಲಾನ್ ಮಾಡಿದ್ದಾರೆ. ಪತ್ನಿಯನ್ನು ಛೂಬಿಟ್ಟು ಸೈಯದ್ ನನ್ನು ಕರೆಸಿಕೊಂಡು, ಭೀಕರವಾಗಿ ಅವನನ್ನು ಕೊಂದಿದ್ದಾರೆ. ಕತ್ತು ಸೀಳಿ ಹಾಕಿದ್ದು, ಕಣ್ಣುಗಳಿಗೆ ಮೆಣಸಿನ ಪುಡಿ ಹಾಕಿ ಹಿಂಸಿಸಿದ್ದಾರೆ. ನಂತರ ಶವವನ್ನು ನಿರ್ಮಾಣ ಹಂತದ ಕಟ್ಟಡದ ಅಡಿಯಲ್ಲಿ ಹೂತು ಹಾಕಿ ಪರಾರಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...