alex Certify
ಕನ್ನಡ ದುನಿಯಾ       Mobile App
       

Kannada Duniya

ಇವಳನ್ನು ಬಿಟ್ಟು ಅವಳನ್ನು ಮದುವೆಯಾಗಲು ಈತ ಆಡಿದ ಇಂಥ ನಾಟಕ..!

religion_change_bhopal_mp_201774_143348_04_07_2017

ಕ್ಯಾನ್ಸರ್ ಹೆಸರು ಕೇಳಿದ್ರೆ ಭಯವಾಗುತ್ತೆ. ಆದ್ರೆ ಯುವಕನೊಬ್ಬ ಕ್ಯಾನ್ಸರ್ ಹೆಸರನ್ನು ಬಂಡವಾಳ ಮಾಡಿಕೊಂಡು ಪತ್ನಿ ಬಾಳಲ್ಲಿ ಆಟವಾಡಿದ್ದಾನೆ. ಪತ್ನಿಯಿಂದ ಬಿಡುಗಡೆ ಪಡೆಯಲು ತಾನು ಕ್ಯಾನ್ಸರ್ ರೋಗಿ ಎಂದಿದ್ದಲ್ಲದೆ ವೈದ್ಯರ ನಕಲಿ ಸರ್ಟಿಫಿಕೇಟ್ ತೋರಿಸಿದ್ದಾನೆ.

ಯುವಕನಿಗೆ ಮೊದಲೇ ಈ ಮದುವೆ ಇಷ್ಟವಿರಲಿಲ್ಲ. ಇನ್ನೊಬ್ಬಳ ಜೊತೆ ಮದುವೆಯಾಗುವ ಪ್ಲಾನ್ ಮಾಡಿದ ಯುವಕ ಪತ್ನಿಗೆ ತಾನು ಕ್ಯಾನ್ಸರ್ ರೋಗಿ ಎಂದಿದ್ದಾನೆ. ವೈದ್ಯರ ನಕಲಿ ಸರ್ಟಿಫಿಕೇಟ್ ಕೂಡ ತೋರಿಸಿದ್ದಾನೆ. ಇಷ್ಟೇ ಅಲ್ಲ ಹಳೆ ಹೆಂಡತಿಗೆ ವಿಚ್ಛೇದನ ನೀಡಿ ಇನ್ನೊಬ್ಬಳನ್ನು ಮದುವೆಯಾಗಲು ಮೂರು ಬಾರಿ ತನ್ನ ಧರ್ಮ ಬದಲಾಯಿಸಿದ್ದಾನೆ. ಈ ಸಂಬಂಧ ಮೊದಲ ಹೆಂಡತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಭೋಪಾಲ್ ನ 27 ವರ್ಷದ ಯುವತಿ ಮದುವೆ ಮುಂಬೈನ ಯುವಕನೊಬ್ಬನ ಜೊತೆ ನಡೆದಿತ್ತು. ಯುವತಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ. ಮದುವೆಯಾದ ಮೂರೇ ತಿಂಗಳಲ್ಲಿ ತನಗೆ ಕ್ಯಾನ್ಸರ್ ಇದೆ ಎಂದು ಪತ್ನಿಯನ್ನು ನಂಬಿಸಿದ್ದಾನೆ. ಮೂರು ತಿಂಗಳು ಭೋಪಾಲ್ ನಲ್ಲಿರುವಂತೆ ಹೇಳಿದ್ದಾನೆ. ಸ್ವಲ್ಪ ಸಮಯ ಬಿಟ್ಟು ಪತ್ನಿ ಮುಂಬೈಗೆ ಬರುವ ಮೊದಲೇ 17 ವರ್ಷದ ಹುಡುಗಿ ಜೊತೆ ಈತ ಮದುವೆಯಾಗಿದ್ದಾನೆ. ಅದಕ್ಕಾಗಿ ಧರ್ಮ ಕೂಡ ಬದಲಾಯಿಸಿದ್ದ.

ಮುಂಬೈಗೆ ಬಂದ ಮೊದಲ ಪತ್ನಿಯನ್ನು ವಿಚ್ಛೇದನ ನೀಡಲು ಒಪ್ಪಿಸಿದ್ದಾನೆ. ವಿಚ್ಛೇದನ ವೇಳೆ ಮತ್ತೆ ಧರ್ಮ ಬದಲಾಯಿಸಿದ್ದಾನೆ. ಆದ್ರೆ ಎರಡನೇ ಪತ್ನಿ ಕಡೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೆ ಧರ್ಮ ಬದಲಾಯಿಸಬೇಕು. ಹಾಗೆ ಇನ್ನೊಮ್ಮೆ ಹುಡುಗಿಯನ್ನು ಮದುವೆಯಾಗಬೇಕೆಂದು ಹೇಳಿದ್ದಾರೆ. ಅದರಂತೆ ನಡೆದುಕೊಂಡಿದ್ದಾನೆ ಯುವಕ. ಆದ್ರೆ ಇನ್ನೂ ಮೊದಲನೇ ಹೆಂಡತಿಗೆ ವಿಚ್ಛೇದನ ಸಿಕ್ಕಿಲ್ಲ. ಆತ ಕೌನ್ಸಲಿಂಗ್ ಗೂ ಬರ್ತಿಲ್ಲ. ಹಾಗಾಗಿ ಮೊದಲ ಹೆಂಡತಿ ಪೊಲೀಸರಿಗೆ ದೂರು ನೀಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...